ಸೌದಿ ಅರೇಬಿಯಾ: ಹಜ್ಗೆ ಕಳ್ಳರು, ಭಿಕ್ಷುಕರನ್ನು ಕಳುಹಿಸಬೇಡಿ ಎಂದು ಪಾಕಿಸ್ತಾನಕ್ಕೆ ಸೌದಿ ಅರೇಬಿಯಾ ಎಚ್ಚರಿಕೆ ನೀಡಿದೆ. ವಿದೇಶಾಂಗ ಸಚಿವಾಲಯದ ಸಭೆಯಲ್ಲಿ ಪಾಕಿಸ್ತಾನದ ಹಜ್ ಕೋಟಾದ ಬಗ್ಗೆ ಸೌದಿ ಅರೇಬಿಯಾ ಕಳವಳ ವ್ಯಕ್ತಪಡಿಸಿದೆ. ಹಜ್ ಕೋಟಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಎಚ್ಚರಿಕೆ ವಹಿಸುವಂತೆ ಸೌದಿ ಅರೇಬಿಯಾ ಪಾಕಿಸ್ತಾನವನ್ನು ಕೇಳಿದೆ.
ಮೂಲಗಳ ಪ್ರಕಾರ, ಬಂಧಿತ ಭಿಕ್ಷುಕರಲ್ಲಿ ಶೇ.90ರಷ್ಟು ಪಾಕಿಸ್ತಾನದವರು ಎಂದು ಅರೇಬಿಯಾ ಹೇಳಿದೆ. ಈ ಎಲ್ಲಾ ಭಿಕ್ಷುಕರು ಉಮ್ರಾ ವೀಸಾದ ಮೇಲೆ ಸೌದಿಗೆ ಬಂದಿದ್ದಾರೆ, ಹಜ್ಗೆ ಪದೇ ಪದೇ ಇಂತವರನ್ನು ಕಳುಹಿಸದಂತೆ ಪಾಕಿಸ್ತಾನಕ್ಕೆ ಮನವಿ, ಮನವಿ ಜೊತೆ ವಾರ್ನಿಂಗ್ ನೀಡಿದೆ.
ʼನಮ್ಮ ಜೈಲುಗಳು ನಿಮ್ಮ ಕೈದಿಗಳಿಂದ ತುಂಬಿದೆ, ಈ ಕಳ್ಳರೆಲ್ಲಾ ಅರಬ್ ವೀಸಾ ಬದಲು ಉಮ್ರಾ ವೀಸಾದಲ್ಲಿ ಸೌದಿಗೆ ಬರುತ್ತಿದ್ದಾರೆ. ಇದರೊಂದಿಗೆ ಸೌದಿ ಅರೇಬಿಯಾದಲ್ಲಿರುವ ಜನರು ಪಾಕಿಸ್ತಾನಿ ನುರಿತ ಕಾರ್ಮಿಕರನ್ನು ನಂಬುತ್ತಿಲ್ಲ ಅವರಿಗೆ ಉದ್ಯೋಗ ಪತ್ರ ವಿತರಿಸುತ್ತಿಲ್ಲʼ ಎಂದು ಸೌದಿ ಹೇಳಿದೆ.