ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಂಗಳವಾರ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು.
ಕ್ಸಿ ಜೊತೆಗಿನ ಸಭೆಯ ನಂತರ ಮಾತನಾಡಿದ ಪುಟಿನ್, ಉಕ್ರೇನ್ ರಷ್ಯಾ ನಡುವೆ ಶಾಂತಿ ಕಾಪಾಡಲು 12 ಅಂಶಗಳ ಶಾಂತಿ ಮಾರ್ಗಸೂಚಿಯನ್ನು ಕಂಡುಕೊಳ್ಳಲಾಗಿದೆ ಎಂದು ತಿಳಿಸಿದರು.
“ಚೀನಾ ಮಂಡಿಸಿದ ಶಾಂತಿ ಯೋಜನೆಯ ಹಲವು ಕ್ರಮಗಳು ರಷ್ಯಾ ನಿಲುವಿಗೆ ಸಮಾನವಾಗಿತ್ತು ಎಂದು ತಿಳಿಸಿದ್ದಾರೆ. ಕೀವ್ ಮತ್ತು ಪಶ್ಚಿಮದ ಜಗತ್ತು ಶಾಂತಿ ಮರುಸ್ಥಾಪನೆಗೆ ಒತ್ತು ನೀಡುತ್ತಿಲ್ಲ ಎಂದು ಪುಟಿ ಆರೋಪಿಸಿದರು.
ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್, ಭದ್ರತಾ ಮಂಡಳಿಯ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಮತ್ತು ರಕ್ಷಣಾ ಸಚಿವ ಸೆರ್ಗೆ ಶೋಯಿಗು ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳು ರಷ್ಯಾದ ಕಡೆಯ ಮಾತುಕತೆಗಳಲ್ಲಿ ಭಾಗವಹಿಸಿದರು.