ಹವಾನಾ: ಕ್ಯೂಬಾದಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಪೆಟ್ರೋಲ್ ಬೆಲೆ ಏರಿಕೆಯಿಂದ ಬರೆ ಎಳೆದಂತಾಗಿದೆ. ಇಂಧನ ಬೆಲೆಯನ್ನು ಶೇ.500ರಷ್ಟು ಏರಿಕೆ ಮಾಡಿದೆ. ಕಮ್ಯೂನಿಸ್ಟ್ ದ್ವೀಪ ರಾಷ್ಟ್ರವಾಗಿರುವ ಕ್ಯೂಬಾ ನೂತನ ಬಜೆಟ್ ನಲ್ಲಿ ದೇಶದ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಸರಣಿ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಇದೀಗ ಪೆಟ್ರೋಲ್ ಉತ್ಪನ್ನಗಳ ದರವನ್ನು ಶೇ.500 ರಷ್ಟು ಏರಿಕೆ ಮಾಡಿದೆ. ಫೆ. 1 ರಿಂದ ಈ ಬೆಲೆ ಅನ್ವಯವಾಗಲಿದೆ. ಕ್ಯೂಬಾದಲ್ಲಿ ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ಬೆಲೆ 86 ರೂ. (25 ಪೆಸಾಸ್) ಇದೆ. ಮುಂದಿನ ತಿಂಗಳಿನಿಂದ ಲೀಟರ್ ಪೆಟ್ರೋಲ್ ಬೆಲೆ 456 ರೂ.(132 ಪೆಸಾಸ್) ಆಗಲಿದೆ ಎಂದು ತಿಳಿದಿದೆ.