ಕೆನಡಾ: ಕೆನಡಾದ ವಿಮಾನ ನಿಲ್ದಾಣದಲ್ಲಿ ಓರ್ವ ಪ್ರಯಾಣಿಕ ವಿಮಾನ ಟೇಕ್ ಆಫ್ ಆಗುವುದಕ್ಕೂ ಮುನ್ನ ಕ್ಯಾಬಿನ್ ಡೋರ್ನಿಂದ ಜಿಗಿದಿರುವ ಘಟನೆ ಸಂಭವಿಸಿದೆ.
ನ್ಯೂಯಾರ್ಕ್ ಫೋಸ್ಟ್ ವರದಿ ಪ್ರಕಾರ, ಟೊರೊಂಟೊ ಪಿಯರ್ಸನ್ ಏರ್ಪೋರ್ಟ್ನಲ್ಲಿ ಜನವರಿ 8 ರಂದು ಘಟನೆ ನಡೆದಿದೆ. ಆ ವ್ಯಕ್ತಿ ವಿಮಾನದಲ್ಲಿ ತನ್ನ ಸೀಟಿನಲ್ಲಿ ಕುಳಿತುಕೊಳ್ಳುವ ಬದಲು ಕ್ಯಾಬಿನ್ ಬಾಗಿಲು ತೆರೆದು ಅದರಿಂದ ಹೊರಗೆ ಜಿಗಿದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅವರು 20 ಅಡಿ ಎತ್ತರದಿಂದ ಕೆಳಗೆ ಬಿದ್ದಿರುವುದರಿಂದ ಗಾಯಗಳಾಗಿವೆ ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವಿಮಾನವು ದುಬೈಗೆ ಹೊರಟಿತ್ತು ಎಂದು ತಿಳಿದುಬಂದಿದೆ.