ಮನಿಲಾ: 32 ಜನರಿದ್ದ ಡೈವ್ ವಿಹಾರ ನೌಕೆಯೊಂದು ಭಾನುವಾರ ಬೆಳಿಗ್ಗೆ ಪಾಲವಾನ್ ಪ್ರಾಂತ್ಯದ ತುಬಟ್ಟಾಹಾ ಬಳಿ ನೀರಿನಲ್ಲಿ ಮುಳುಗಿ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಫಿಲಿಪೈನ್ಸ್ ಕೋಸ್ಟ್ ಗಾರ್ಡ್ ತಿಳಿಸಿದೆ.
ಭಾನುವಾರ ಎಂ / ವೈ ಡ್ರೀಮ್ ಕೀಪರ್ ಎಂಬ ವಿಹಾರ ನೌಕೆ ಮುಳುಗಿದೆ ಎಂದು ಕಮಾಂಡರ್ ಅರ್ಮಾಂಡೊ ಬಾಲಿಲೊ ಹೇಳಿದ್ದಾರೆ. ದೋಣಿ ಗುರುವಾರ ಮಧ್ಯಾಹ್ನ ಸೆಬುದಿಂದ ಹೊರಟು ಶನಿವಾರ ರಾತ್ರಿ ತುಬ್ಬಟಾಹಾ ರೀಫ್ಸ್ ನ್ಯಾಚುರಲ್ ಪಾರ್ಕ್ ತಲುಪಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಹಾರ ನೌಕೆಯಲ್ಲಿ 15 ಸಿಬ್ಬಂದಿ, 12 ಪ್ರಯಾಣಿಕರು ಮತ್ತು 5 ಡೈವರ್ಸ್ ಸೇರಿದಂತೆ 32 ಜನರು ಇದ್ದರು, 28 ಜನರನ್ನು ರಕ್ಷಿಸಲಾಗಿದೆ ಮತ್ತು ನಾಲ್ವರು ಕಾಣೆಯಾಗಿದ್ದಾರೆ ಎಂದು ಬಾಲಿಲೊ ಹೇಳಿದರು.
ತುಬ್ಬಟಾಹಾ ರೀಫ್ಸ್ ನ್ಯಾಚುರಲ್ ಪಾರ್ಕ್ ಸಮುದ್ರ ಸಂರಕ್ಷಿತ ಪ್ರದೇಶ ಮತ್ತು ವಿಶ್ವಪ್ರಸಿದ್ಧ ಸ್ಕೂಬಾ ಡೈವಿಂಗ್ ತಾಣವಾಗಿದೆ.