ಮಾಲಿ: ಲಿಬಿಯಾ ಕರಾವಳಿಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಮಾಲಿ ದೇಶದ 22 ವಲಸಿಗರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಜೂನ್ 22 ರಂದು ಟುನೀಶಿಯಾದ ಗಡಿಯ ಸಮೀಪವಿರುವ ಲಿಬಿಯಾದ ನಗರವಾದ ಜುವಾರಾದಿಂದ ರಬ್ಬರ್ ಬೋಟ್ನಲ್ಲಿ ಹೊರಟಿದ್ದ ಪ್ರವಾಸಿಗರು ಮಾರ್ಗಮಧ್ಯೆ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ಜಲೀಕರಣ ಮತ್ತು ನೀರಿ ಮುಳುಗಿ 22 ಮಂದಿ ಸಾವನ್ನಪ್ಪಿದ್ದಾರೆ. ಸಮುದ್ರದಲ್ಲಿ ಒಂಬತ್ತು ದಿನಗಳ ಹೋರಾಡಿ ಜೀವ ಉಳಿಸಿಕೊಂಡಿದ್ದ 61 ಜನರನ್ನು ಲಿಬಿಯಾದ ಕೋಸ್ಟ್ಗಾರ್ಡ್ಗಳು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.