ಜಕಾರ್ತಾ: ಇಂಡೋನೇಷ್ಯಾದ ಗೊರೊಂಟಾಲೊ ಪ್ರಾಂತ್ಯದಲ್ಲಿ ಬುಧವಾರ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಯಾವುದೇ ಹಾನಿ ಅಥವಾ ಸಾವುನೋವುಗಳು ವರದಿಯಾಗಿಲ್ಲ ಎಂದು ಹವಾಮಾನ ಬ್ಯೂರೋ ತಿಳಿಸಿದೆ.
ಬೋನ್ ಬೊಲಾಂಗೊ ಜಿಲ್ಲೆಯ ಆಗ್ನೇಯಕ್ಕೆ 69 ಕಿ.ಮೀ ದೂರದಲ್ಲಿ ಮತ್ತು ಸಮುದ್ರದ ತಳದಲ್ಲಿ 138 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ ಎಂದು ಬ್ಯೂರೋ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಭೂಕಂಪದಿಂದ ಪ್ರಾಂತ್ಯಗಳಲ್ಲಿ ಯಾವುದೇ ಹಾನಿ ಅಥವಾ ಸಾವುನೋವುಗಳು ಸಂಭವಿಸಿಲ್ಲ ಎಂದು ಬ್ಯೂರೋ ವಕ್ತಾರರು ತಿಳಿಸಿದ್ದಾರೆ.
ಭೂಕಂಪದಿಂದಾಗಿ ಕಟ್ಟಡಗಳು ಅಥವಾ ಮನೆಗಳು ನಾಶವಾದ ಅಥವಾ ನಿವಾಸಿಗಳು ಗಾಯಗೊಂಡಿರುವ ಬಗ್ಗೆ ಪ್ರಾಥಮಿಕ ವರದಿಗಳಿಲ್ಲ.