News Karnataka Kannada
Sunday, May 05 2024
ವಿದೇಶ

ಐಡಿಎಫ್‌ ಅನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿ, ಇರಾನ್‌ ಮನವಿ

Iran calls IDF a terrorist organisation
Photo Credit : News Kannada

ಟೆಹರಾನ್‌: ಹಮಾಸ್‌ ಉಗ್ರರ ದಾಳಿಯಿಂದ ಮೈಕೊಡವಿ ನಿಂತ ಇಸ್ರೇಲ್‌ ಹಮಾಸ್‌ ಉಗ್ರರ ಮೇಲೆ ರಣ ಭೀಕರ ದಾಳಿ ನಡೆಸುತ್ತಿದೆ. ಹಮಾಸ್ ಉಗ್ರರನ್ನು ಸಂಪೂರ್ಣ ಸಂಹಾರ ಮಾಡುವುದಾಗಿ ಘೋಷಿಸಿದೆ.

ಇದೀಗ ಗಾಜಾ ಮೇಲೆ, ಪ್ಯಾಲೆಸ್ತಿನ್ ಜನತೆ ಮೇಲೆ ದಾಳಿ ಮಾಡುತ್ತಿರುವ ಇಸ್ರೇಲ್ ಸೇನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲು ಇರಾನ್ ಮುಸ್ಲಿಂ ರಾಷ್ಟ್ರಗಳಿಗೆ ಮನವಿ ಮಾಡಿದೆ. ಇಸ್ಲಾಮಿಕ್ ಕೋಆಪರೇಶನ್ ಹಾಗೂ ಅರಬ್ ಲೀಗ್ ನಡೆಸಿದ ತುರ್ತು ಸಭೆಯಲ್ಲಿ ಮಾತನಾಡಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ಈ ಮನವಿ ಮಾಡಿದ್ದಾರೆ.

ಇಸ್ರೇಲ್ ಸೇನೆ ಅತಿಕ್ರಮ ಪ್ರವೇಶ ಮಾಡುತ್ತಿದೆ. ಪ್ಯಾಲೆಸ್ತಿನ ಜನರ ವಸತಿ ಪ್ರದೇಶಗಳನ್ನು ಕಬ್ಜಾ ಮಾಡುತ್ತಿದೆ. ಅಮಾಯಕ ಜನರ ಮೇಲೆ ದಾಳಿ ಮಾಡುತ್ತಿದೆ. ಮಕ್ಕಳು, ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ಪ್ಯಾಲೆಸ್ತಿನ್ ಜನರ ಬದುಕನ್ನೇ ಇಸ್ರೇಲ್ ಸೇನೆ ಕಸಿದುಕೊಂಡಿದೆ. ಇದು ಭಯೋತ್ಪಾದಕ ಕೃತ್ಯ. ಹೀಗಾಗಿ ಇಸ್ರೇಲ್ ಸೇನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಇಸ್ಲಾಂ ರಾಷ್ಟ್ರಗಳು ಗುರುತಿಸಬೇಕು ಎಂದು ಇರಾನ್ ಮನವಿ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು