ಟೆಲ್ ಅವಿವ್: ಗಾಜಾದ ಅಲ್-ಶಿಫಾ ಆಸ್ಪತ್ರೆಯಲ್ಲಿ ಶೋಧ ಕಾರ್ಯ ನಡೆಸುತ್ತಿರುವ ಇಸ್ರೇಲ್ ಸೇನೆಗೆ ಹಮಾಸ್ ಉಗ್ರರು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವವರ ಮಾಹಿತಿ ಹೊಂದಿರುವ ಲ್ಯಾಪ್ಟಾಪ್ ದೊರೆತಿದೆ.
ಆಸ್ಪತ್ರೆಯಲ್ಲಿ “ವಿವೇಚನೆ, ತಾಳ್ಮೆಯೊಂದಿಗೆ ಹುಡುಕಾಟ ನಡೆಸುತ್ತಿದೆ ಎಂದು ಐಡಿಎಫ್ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ. ಆಸ್ಪತ್ರೆಯಲ್ಲಿ ಭಯೋತ್ಪಾದಕರು ಅತಿಹೆಚ್ಚಿನ ಮೂಲಸೌಕರ್ಯಗಳನ್ನು ಪಡೆಯುತ್ತಿರುವುದನ್ನು ಇಸ್ರೇಲ್ ಸೇನೆ ಪತ್ತೆಹಚ್ಚಿದೆ.
ಅಕ್ಟೋಬರ್ 7 ರ ದಾಳಿಯ ಬಗ್ಗೆ ಮಾಹಿತಿ ಹೊಂದಿರುವ ಹಮಾಸ್ ಭಯೋತ್ಪಾದನಾ ಜಾಲದ ಗುಪ್ತಚರ ವಸ್ತುಗಳು ಇಸ್ರೇಲ್ ಸೇನೆಗೆ ಸಿಕ್ಕಿದೆ ಎಂದು ಐಡಿಎಫ್ ತಿಳಿಸಿದೆ. ಅಲ್ಲದೆ ಆಸ್ಪತ್ರೆ ಸಂಕೀರ್ಣದಿಂದ ಕೆಲ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಐಡಿಎಫ್ ಅನ್ನು ತಡೆಯಲು ಹಮಾಸ್ ಅಲ್ ಶಿಫಾ ಆಸ್ಪತ್ರೆಯೊಳಗೆ ಮಕ್ಕಳು, ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸುತ್ತಿದೆ ಎಂದು ಹೇಳಿದೆ.