News Karnataka Kannada
Friday, May 17 2024
ವಿದೇಶ

ಗಾಜಾ ಆಸ್ಪತ್ರೆ ಮೇಲೀನ ದಾಳಿ ಖಂಡಿಸಿದ ವಿಶ್ವ: ಟ್ವಿಸ್ಟ್ ಕೊಟ್ಟ ಇಸ್ರೇಲ್

Israel condemns attack on Gaza hospital
Photo Credit : IANS

ಪ್ಯಾಲೆಸ್ತೀನ್:​ ಪ್ಯಾಲೆಸ್ತೀನ್ ಭಾಗವಾಗಿರುವ ಗಾಜಾ ಸ್ಟ್ರಿಪ್​ ಮೇಲೆ ಇಸ್ರೇಲ್​ ಏರ್​ಸ್ಟ್ರೈಕ್ ಮುಂದುವರೆಸಿದೆ. ಕಳೆದ ದಿನ ಏರ್​ಸ್ಟ್ರೈಕ್ ಮೂಲಕ ಗಾಜಾದ ಆಸ್ಪತ್ರೆಯೊಂದರ ಮೇಲೆ ಬಾಂಬ್ ದಾಳಿ ಮಾಡಲಾಗಿದ್ದು ಬರೋಬ್ಬರಿ 500ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲಿಸ್ತೀನ್ ಆರೋಪಿಸಿದೆ.

ದಾಳಿಯಲ್ಲಿ ಬದುಕುಳಿದ ಕೆಲವರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ನಡೆಯುತ್ತಿದೆ. ನೇರವಾಗಿ ಆಸ್ಪತ್ರೆಯನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಭಾರೀ ಭಯದಲ್ಲಿದ್ದಾರೆ. ಆಸ್ಪತ್ರೆ ಮೇಲಿನ ಈ ದಾಳಿಯನ್ನು ವಿಶ್ವವೇ ಖಂಡಿಸಿದೆ.

ಆದರೆ ಆಸ್ಪತ್ರೆ ಮೇಲೆ ಬಾಂಬ್ ದಾಳಿಗೆ ಸಂಬಂಧ ಪಟ್ಟಂತೆ ಇಸ್ರೇಲಿನ ಸೇನಾ ವಕ್ತಾರ ಡೇನಿಯಲ್ ಹಗಾರಿ ಮಾತನಾಡಿದ್ದು, ಹಮಾಸ್ ಉಗ್ರರು ಉಡಾಯಿಸಿದ ರಾಕೆಟ್​ಗಳು ಮಿಸ್ ಫೈರ್ ಆಗಿ ಆಸ್ಪತ್ರೆಯ ಮೇಲೆ ಬಿದ್ದಿವೆ. ಇದಕ್ಕೆ ನಮ್ಮ ಇಂಟಲಿಜೆನ್ಸ್ ಮೂಲಗಳು ಮಾಹಿತಿ ನೀಡಿವೆ. ಈ ದುರಂತಕ್ಕೆ ಹಮಾಸ್ ಉಗ್ರರೇ ನೇರ ಕಾರಣ. ಇದಕ್ಕೆ ಸಾಕ್ಷಿಯಾಗಿ ಭಯೋತ್ಪಾದಕರು ಉಡಾಯಿಸಿದ ರಾಕೆಟ್ ದಾಳಿಯ ವಿಡಿಯೋವನ್ನು ಇಸ್ರೇಲ್ ರಿಲೀಸ್ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು