ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರು ಅವರಿಗೆ ಮನೆಯಲ್ಲಿ ವಾಕಿಂಗ್ ನಡೆಸುವ ವೇಳೆ ಹಾವೊಂದು ಕಚ್ಚಿರುವ ಬಗ್ಗೆ ವರದಿಯಾಗಿದೆ. ಸಂಜೀವ ಮಠಂದೂರು ಸಂಜೆ ವೇಳೆ ಮನೆಯ ಸಮೀಪ ವಾಕಿಂಗ್ ನಡೆಸುತ್ತಿದ್ದು, ಈ ವೇಳೆ ಹಾವೊಂದು ಕಚ್ಚಿರುವ ಬಗ್ಗೆ ವರದಿಯಾಗಿದೆ. ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಕಾರಣ ಯಾವುದೇ ತೊಂದರೆಯಿಲ್ಲದೆ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.