News Karnataka Kannada
Friday, May 03 2024
ವಿದೇಶ

ಜಾರ್ಜಿಯಾದಲ್ಲಿ ಹಿಂದೂ ಪರಂಪರೆಯ ತಿಂಗಳು ಘೋಷಣೆ: ಈ ಕ್ರಮದ ಮಹತ್ವ ಏನು ಗೊತ್ತಾ

Georgia declares Hindu Heritage Month: Know the significance of this move
Photo Credit : IANS

ನ್ಯೂಯಾರ್ಕ್: ಅಮೆರಿಕದ ಜಾರ್ಜಿಯಾ ರಾಜ್ಯದ ಗವರ್ನರ್ ಬ್ರಿಯಾನ್ ಕೆಂಪ್, ಅಕ್ಟೋಬರ್ ಅನ್ನು ರಾಜ್ಯದಲ್ಲಿ ‘ಹಿಂದೂ ಪರಂಪರೆಯ ತಿಂಗಳು’ ಎಂದು ಆಚರಿಸಲಾಗುವುದು ಎಂದು ಘೋಷಿಸಿದ್ದಾರೆ. ಟೆಕ್ಸಾಸ್, ಓಹಿಯೋ, ನ್ಯೂಜೆರ್ಸಿ, ಮ್ಯಾಸಚೂಸೆಟ್ಸ್, ಜಾರ್ಜಿಯಾ, ಫ್ಲೋರಿಡಾ, ಮಿನ್ನೇಸೋಟ, ವರ್ಜೀನಿಯಾಗಳಲ್ಲಿಯೂ ಹಿಂದೂ ಪರಂಪರೆಯ ತಿಂಗಳ ಆಚರಣೆಗೆ ಗವರ್ನರ್‌ ಹಸಿರು ನಿಶಾನೆ ನೀಡಿದ್ದಾರೆ.

ಭಾರತದ ಸರ್ವ ಶ್ರೇಷ್ಠ ಸಂತ ಮಹಾತ್ಮ ಗಾಂಧಿ ಜನ್ಮವೆತ್ತಿದ ತಿಂಗಳಾಗಿರುವ ಕಾರಣ ಈ ಘೋಷಣೆ ಮಹತ್ವ ಪಡೆದಿದೆ. ಅಲ್ಲದೆ ಇದೇ ವೇಳೆ ನವರಾತ್ರಿ ಮತ್ತು ದೀಪಾವಳಿಯಂತಹ ಪ್ರಮುಖ ಹಿಂದೂ ಹಬ್ಬಗಳನ್ನು ಆಚರಿಸಲಾಗುತ್ತದೆ. ಹಿಂದೂ ಪರಂಪರೆ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಮೌಲ್ಯಗಳು ಜೀವನದ ಅನೇಕ ಸಮಸ್ಯೆಗಳಿಗೆ ಅಮೂಲ್ಯವಾದ ಪರಿಹಾರಗಳನ್ನು ಒದಗಿಸುತ್ತವೆ ಎಂದು
ಗವರ್ನರ್ ಬ್ರಿಯಾನ್ ಕೆಂಪ್ ಹೇಳಿದ್ದಾರೆ.

ಈ ಕ್ರಮವನ್ನು ಎಚ್‌ಎನ್‌ಎ (ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ) ಸ್ವಾಗತಿಸಿದೆ. ಅದೇ ರೀತಿ ಯುಎಸ್‌ನ ಹಿಂದೂ ವಕೀಲರ ಗುಂಪು, “ಜಾರ್ಜಿಯಾ ಹಿಂದೂ-ಅಮೆರಿಕನ್ನರ ಕೊಡುಗೆಯನ್ನು ಗುರುತಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಹೇಳಿದೆ.

ಗವರ್ನರ್ @BrianKempGA ಅವರ ಘೋಷಣೆಗೆ ನಮ್ಮ ಧನ್ಯವಾದಗಳು. ಜಾರ್ಜಿಯಾದ ಹಿಂದೂ ಸ್ನೇಹಿತರ ಅವಿರತ ಶ್ರಮದಿಂದ ಈ ಘೋಷಣೆ ಸಾಧ್ಯವಾಗಿದೆ. ಹಿಂದೂ ಧರ್ಮವು ಅಮೆರಿಕದ ಸಾಂಸ್ಕೃತಿಕ ಪರಿಸರಕ್ಕೆ ಮಹತ್ತರವಾದ ಕೊಡುಗೆ ನೀಡಿದೆ” ಎಂದು CoHNA ಬುಧವಾರ X ನಲ್ಲಿ ಬರೆದುಕೊಂಡಿದೆ.

100 ಕ್ಕೂ ಹೆಚ್ಚು ದೇಶಗಳಲ್ಲಿ 1.2 ಶತಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಹಿಂದೂ ಧರ್ಮವು ವಿಶ್ವದ ಅತಿದೊಡ್ಡ ಮತ್ತು ಹಳೆಯ ಧರ್ಮಗಳಲ್ಲಿ ಒಂದಾಗಿದೆ ಎಂದು ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು