News Karnataka Kannada
Wednesday, May 01 2024
ವಿದೇಶ

ಡಮಾಸ್ಕಸ್: ಸಿರಿಯಾದಲ್ಲಿ ಐಎಸ್ ಉಗ್ರರ ದಾಳಿ, 6 ಜನರ ಸಾವು

ಪ್ರೀತಿಸಿದವರೊಂದಿಗೆ ವಿವಾಹವಾಗದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ನಡೆದಿದೆ.
Photo Credit : IANS

ಡಮಾಸ್ಕಸ್: ಈಶಾನ್ಯ ಸಿರಿಯಾದ ಹಸಾಕಾ ಪ್ರಾಂತ್ಯದಲ್ಲಿ ರಸ್ತೆಯೊಂದರಲ್ಲಿ ವಾಹನ ಚಲಾಯಿಸುತ್ತಿದ್ದ ಆರು ಜನರನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಈ ಆರು ಜನರ ಗುರುತುಗಳು ಇನ್ನೂ ತಿಳಿದುಬಂದಿಲ್ಲ, ಪೂರ್ವ ಪ್ರಾಂತ್ಯದ ಡೀರ್ ಅಲ್-ಝೌರ್ ಗೆ ಹೋಗುವ ಖುರಾಫಿ ರಸ್ತೆಯಲ್ಲಿ ಐಎಸ್ ಉಗ್ರರು ಹೊಂಚುಹಾಕಿದ್ದಾರೆ ಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯವು ಮಾಧ್ಯಮ ಸಂಸ್ಥೆಗೆ ತಿಳಿಸಿದೆ.

ಇತ್ತೀಚಿನ  ದಾಳಿಯೊಂದಿಗೆ, ಈಶಾನ್ಯ ಸಿರಿಯಾದಲ್ಲಿ ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸ್ (ಎಸ್ಡಿಎಫ್) ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ 2022 ರಲ್ಲಿ ಐಎಸ್ 130 ದಾಳಿಗಳನ್ನು ನಡೆಸಿದೆ, 37 ನಾಗರಿಕರು ಮತ್ತು 67 ಎಸ್ಡಿಎಫ್ ಹೋರಾಟಗಾರರು ಸೇರಿದಂತೆ 104 ಜನರನ್ನು ಕೊಂದಿದೆ ಎಂದು ಯುಕೆ ಮೂಲಗಳು ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು