ಜರುಸಲೇಂ: ಇಸ್ರೇಲ್ ಹಮಾಸ್ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಲವು ದೇಶಗಳು ಇಸ್ರೇಲ್ ಸೇನಾ ಕ್ರಮವನ್ನು ಖಂಡಿಸಿವೆ. ಆದರೆ ಇದಕ್ಕೆ ಜಗ್ಗದ ಇಸ್ರೇಲ್ ಹಮಾಸ್ ಉಗ್ರರ ಮೇಲೆ ಮೇಲಿಂದ ಮೇಲೆ ದಾಳಿ ನಡೆಸುತ್ತಿವೆ.
ಈ ನಡುವೆ ಫ್ರಾನ್ಸ್ ಈ ಮೊದಲಿನಿಂದಲು ಹಮಾಸ್ ಉಗ್ರ ಕೃತ್ಯವನ್ನು ಖಂಡಿಸುತ್ತಾ ಬಂದಿತ್ತು. ಇದೀಗ ಇಸ್ರೇಲ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಯುದ್ಧ ಭೂಮಿ ಇಸ್ರೇಲ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಭೇಟಿ ನೀಡಿದ್ದಾರೆ.
ಈ ಹಿಂದೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಭೇಟಿ ನೀಡಿದ್ದರು. ನಂತರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕೂಡ ಭೇಟಿ ನೀಡಿದ್ದರು. ಇದೀಗ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಸ್ರೇಲ್ನ ಟೆಲ್ ಅವಿವ್ಗೆ ಆಗಮಿಸಿದ್ದಾರೆ.
ಇಸ್ರೇಲ್ ಅಧಿಕಾರಗಳ ವರದಿ ಪ್ರಕಾರ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಯುದ್ಧದ ಎರಡು ವಾರಗಳ ನಂತರ ಇಸ್ರೇಲ್ಗೆ ಭೇಟಿ ನೀಡಿದ್ದಾರೆ. ಹಮಾಸ್ ಉಗ್ರರು ಗಾಜಾಪಟ್ಟಿ ಮೇಲೆ ದಾಳಿ ಮಾಡಿದಾಗ 1,400 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ ಫ್ರೆಂಚ್ನ 30 ನಾಗರಿಕರು ಇದ್ದರು ಎಂದು ಹೇಳಲಾಗಿದೆ.