ಮಾಲೆ: ಮಾಲ್ಡೀವ್ಸ್ನಲ್ಲಿ ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಚೀನಾ ಬೆಂಬಲಿಗ ಅಭ್ಯರ್ಥಿ ಮೊಹಮ್ಮದ್ ಮುಯಿಝು ಗೆಲುವು ಸಾಧಿಸಿದ್ದಾರೆ, ಈ ಫಲಿತಾಂಶವು ಭಾರತ ಮಾಲ್ಡೀವ್ಸ್ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಪ್ರಾಥಮಿಕ ಚುನಾವಣಾ ಫಲಿತಾಂಶದಲ್ಲಿ ಮುಯಿಝು ಶೇ.53 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಅದೇ ಸಮಯದಲ್ಲಿ, ಹಾಲಿ ಅಧ್ಯಕ್ಷ ಮತ್ತು ಆಡಳಿತಾರೂಢ ಮಾಲ್ಡೀವ್ಸ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ನಾಯಕ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು 46 ಶೇಕಡಾ ಮತಗಳನ್ನು ಪಡೆದಿದ್ದಾರೆ.
ಮಾಲ್ಡೀವ್ಸ್ ಸಂವಿಧಾನದ ಪ್ರಕಾರ, ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು, ಅಭ್ಯರ್ಥಿಯು ಒಟ್ಟು ಮತಗಳ ಶೇಕಡಾ 50ಕ್ಕಿಂತ ಹೆಚ್ಚು ಗಳಿಸಬೇಕು. ಸೆಪ್ಟೆಂಬರ್ 9ರಂದು ನಡೆದ ಮೊದಲ ಸುತ್ತಿನ ಮತದಾನದಲ್ಲೂ ಮುಯಿಜ್ಜು ಶೇ.46ರಷ್ಟು ಮತಗಳನ್ನು ಪಡೆಯುವ ಮೂಲಕ ಮುಂಚೂಣಿಯಲ್ಲಿದ್ದರು.