News Karnataka Kannada
Thursday, May 09 2024
ವಿದೇಶ

ಐ-ಪೋನ್ ಬಳಕೆದಾರರೇ ಎಚ್ಚರ: ಚೀನಾ ಸರ್ಕಾರದಿಂದ ಮಹತ್ವದ ಆದೇಶ

Beware of iPhone users: Chinese government
Photo Credit : IANS

ಬೀಜಿಂಗ್: ಚೀನಾ ಸರ್ಕಾರ ಐ-ಫೋನ್ ಕಂಪನಿಗೆ ಇಂದು ಮಾಸ್ಟರ್ ಸ್ಟ್ರೋಕ್‌ ಕೊಟ್ಟಿದೆ. ಐ-ಫೋನ್‌ನಲ್ಲಿ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಐ-ಫೋನ್‌ಗಳನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡದಂತೆ ಸರ್ಕಾರಿ ಅಧಿಕಾರಿಗಳಿಗೆ ಚೀನಾ ಸರ್ಕಾರ ಕಟ್ಟಾಜ್ಞೆಯನ್ನು ಹೊರಡಿಸಿದೆ. ಇನ್ಮುಂದೆ ಆಡಳಿತಾಧಿಕಾರಿಗಳು ಐ-ಫೋನ್‌ಗಳನ್ನು ತರದಂತೆ ಸೂಚಿಸಲಾಗಿದೆ.

ಅಮೆರಿಕ ಹಾಗೂ ಚೀನಾ ನಡುವೆ ಹೆಚ್ಚುತ್ತಿರುವ ಪೈಪೋಟಿಯ ಮಧ್ಯೆ ಕ್ಸಿ ಜಿನ್‌ಪಿಂಗ್‌ನ ಸರ್ಕಾರ ಕೆಲ ಅಧಿಕಾರಿಗಳಿಗೆ ಐಫೋನ್ ಬಳಸದಂತೆ ನಿಷೇಧ ಹೇರಿರುವುದಾಗಿ ಬುಧವಾರ ವರದಿಯಾಗಿದೆ.

ವರದಿಯ ಪ್ರಕಾರ ಚೀನಾದ ಕೆಲ ಸರ್ಕಾರಿ ಸಿಬ್ಬಂದಿ ಚಾಟ್ ಗ್ರೂಪ್ ಅಥವಾ ಮೀಟಿಂಗ್‌ಗಳಲ್ಲಿ ಐಫೋನ್ ಬಳಕೆಯನ್ನು ನಿಲ್ಲಿಸುವಂತೆ ಸೂಚಿಸಿದೆ. ಆಪಲ್‌ನ ಫೋನ್‌ಗಳು ಮತ್ತು ಇತರ ವಿದೇಶಿ ಬ್ರ್ಯಾಂಡ್‌ಗಳ ಸಾಧನಗಳನ್ನು ಸರ್ಕಾರಿ ಕೆಲಸಕ್ಕಾಗಿ ಬಳಸದಂತೆ ಹಾಗೂ ಕಚೇರಿಗೆ ತರದಂತೆ ಕೇಂದ್ರ ಸರ್ಕಾರಿ ಏಜೆನ್ಸಿಗಳ ಅಧಿಕಾರಿಗಳಿಗೆ ಚೀನಾ ಆದೇಶ ನೀಡಿದೆ. ಚೀನಾದ ಈ ಕ್ರಮ ವ್ಯಾಪಕವಾಗಿ ಜಾರಿಯಾದಲ್ಲಿ ಕಂಪನಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು