News Karnataka Kannada
Friday, May 03 2024
ವಿದೇಶ

ದಕ್ಷಿಣ ಕೊರಿಯಾದಲ್ಲಿ ಭಾರಿ ಮಳೆ, ಪ್ರವಾಹಕ್ಕೆ 21 ಮಂದಿ ಬಲಿ

At least 21 killed in south Korea due to heavy rains, floods
Photo Credit : IANS

ಸಿಯೋಲ್: ದಕ್ಷಿಣ ಕೊರಿಯಾದಾದ್ಯಂತ ಭಾರೀ ಮಳೆಯಿಂದಾಗಿ 21 ಜನರು ಸಾವನ್ನಪ್ಪಿದ್ದು, ಭೀಕರ ಮಳೆ, ಪ್ರವಾಹದಿಂದಾಗಿ ಸಾವಿರಾರು ಜನರನ್ನು ಅಪಾಯಕಾರಿ ಸ್ಥಳಗಳಿಂದ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಈ ನಡುವೆ ಪ್ರವಾಹದಲ್ಲಿ ಸಿಲುಕಿದ್ದ 10 ಮಂದಿ ನಾಪತ್ತೆಯಾಗಿದ್ದಾರೆ. ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಜಿಯೊಂಗ್‌ಸಾಂಗ್‌ನ ಆಗ್ನೇಯ ಪ್ರಾಂತ್ಯದಿಂದ ಹೆಚ್ಚಿನ ಸಾವುನೋವುಗಳು ವರದಿಯಾಗಿವೆ. ಅಲ್ಲಿ ಮನೆ ಕುಸಿತದಿಂದ 16 ಜನರು ಸಾವನ್ನಪ್ಪಿದ್ದಾರೆ. ಗೋಸನ್ ಅಣೆಕಟ್ಟು ತುಂಬಿ ಹರಿಯಲಾರಂಭಿಸಿದ್ದು ಗೋಸನ್‌ನ ಕೇಂದ್ರ ಕೌಂಟಿಯಲ್ಲಿದ್ದ ಸುಮಾರು 6,400 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಅಣೆಕಟ್ಟಿನ ಸಮೀಪವಿರುವ ತಗ್ಗು ಪ್ರದೇಶದ ಹಲವು ಗ್ರಾಮಗಳು ಮುಳುಗಡೆಯಾಗಿದ್ದು, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮತ್ತು ಸೇತುವೆಗಳು ಕಡಿತಗೊಂಡಿದೆ. ಕೆಲವು ನಿವಾಸಿಗಳು ಈಗಲೂ ಕೂಡ ಆ ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ.

ರಾಷ್ಟ್ರದಾದ್ಯಂತ 13 ನಗರಗಳು ಮತ್ತು ಕೌಂಟಿಗಳಲ್ಲಿ ವಿದ್ಯುತ್ ಕಡಿತವು ವರದಿಯಾಗಿದೆ. ಪ್ರವಾಹದಿಂದಾಗಿ ಬೆಳೆಗಳು ಮತ್ತು ರಸ್ತೆಗಳು ಕೊಚ್ಚಿ ಹೋಗಿವೆ.

ರಾಷ್ಟ್ರವ್ಯಾಪಿ, 97 ರಸ್ತೆಗಳು ಮುಚ್ಚಲ್ಪಟ್ಟಿವೆ, 19 ರಾಷ್ಟ್ರೀಯ ಉದ್ಯಾನವನಗಳನ್ನು ಮುಚ್ಚಲಾಗಿದೆ. ಕೊರಿಯಾದ ಹವಾಮಾನ ಆಡಳಿತವು ವಿಶೇಷವಾಗಿ ಚುಂಚೊಂಗ್ ಮತ್ತು ಜಿಯೊಲ್ಲಾ ಪ್ರಾಂತ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ, ಜುಲೈ 18 ರವರೆಗೆ ಮತ್ತು ಜೆಜು ದ್ವೀಪದಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು