News Karnataka Kannada
Thursday, April 25 2024
Cricket
ಮನರಂಜನೆ

ಭಾರತ್ ಸಿನಿಮಾಸ್‌ನಲ್ಲಿ ಪುಲಿಮುಂಚಿ ಚಿತ್ರದ ಟೀಸರ್, ಪೋಸ್ಟರ್ ಬಿಡುಗಡೆ

'Pulimunchi' teaser, poster released at Bharat Cinemas
Photo Credit : News Kannada

ಮಂಗಳೂರು: ತ್ರಿಶೂಲ್ ಶೆಟ್ಟಿ ನಿರ್ದೇಶನದ ತುಳು ಚಿತ್ರ ‘ಪುಲಿಮುಂಚಿ’ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜುಲೈ 14ರಂದು ಮಂಗಳೂರಿನ ಭಾರತ್ ಸಿನಿಮಾಸ್‌ನಲ್ಲಿ ನಡೆಯಿತು.

ಮಾಜಿ ಎಂಎಲ್ ಸಿ ಐವನ್ ಡಿಸೋಜ ಟೀಸರ್ ಮತ್ತು ಪೋಸ್ಟರ್ ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಅವರು ಚಿತ್ರದ ಟೀಸರ್‌ ನೋಡಿದಾಕ್ಷಣವೇ ಮನಸ್ಸಿಗೆ ಮುದ ಎನಿಸಿತು. ಚಿತ್ರ ತಂಡದ ಶ್ರಮ ಟೀಸರ್‌ ಮೂಲಕ ತಿಳಿಯುತ್ತದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿದೆ ಎಂದರು.

ತ್ರಿಶೂಲ್ ಶೆಟ್ಟಿ ಮಾತನಾಡಿ, ಹಾಸ್ಯ ಸೇರಿದಂತೆ ಪ್ರತಿ ಸನ್ನಿವೇಶಗಳನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ಕಟ್ಟಿಕೊಡುವಲ್ಲಿ ಚಿತ್ರ ತಂಡ ಯಶಸ್ಸಿಯಾಗಿದೆ. ತಂಡಸ್ಪೂರ್ತಿಯಿಂದ ಎಲ್ಲರೂ ಕೂಡ ಕೆಲಸ ಮಾಡಿದ್ದು, ಒಂದು ಉತ್ತಮ ಸಿನಿಮಾ ನಿರ್ಮಾಣವಾದ ಖುಷಿಯಿದೆ. ಚಲನಚಿತ್ರವು ದೊಡ್ಡ ಹಿಟ್ ಆಗುವ ವಿಶ್ವಾಸವಿದೆ ಎಂದರು.

ಚಿತ್ರದ ನಾಯಕ ನಟ ವಿನೀತ್ ಕುಮಾರ್ ಮಾತನಾಡಿ, ಈ ಚಿತ್ರಕ್ಕಾಗಿ ನಾವು ತಂಡ ಸ್ಪೂರ್ತಿ ಮತ್ತು ಪರಿಶ್ರಮದಿಂದ ಕೆಲಸ ಮಾಡಿದ್ದೇವೆ. ಈಗ ಸಿನಿಮಾ ನಮ್ಮ ಪ್ರೇಕ್ಷಕರ ಕೈಯಲ್ಲಿದೆ. ತುಳು ಚಿತ್ರರಂಗದ ಬೆಳವಣಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಪಮ್ಮಿ ಕೊಡಿಯಾಲಬೈಲ್, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ನ್ಯಾಯವಾದಿ ಪದ್ಮರಾಜ್ ಆರ್, ಮಂಗಳೂರು ಅನಘಾ ಸುಜುಕಿ ವ್ಯವಸ್ಥಾಪಕಿ ಪೂರ್ಣಿಮಾ, ಸ್ವರಾಜ್ ಶೆಟ್ಟಿ, ರಾಹುಲ್ ಅಮೀನ್, ಸಮತಾ ಅಮೀನ್, ಅದ್ವಿಕಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತ್ರಿಜಯ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಹರಿಪ್ರಸಾದ್ ರೈ ಅವರು ‘ಪುಲಿಮುಂಚಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಮಯೂರ್ ಆರ್ ಶೆಟ್ಟಿ ಛಾಯಾಗ್ರಹಣ, ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ಸಂಯೋಜಿಸಿದ್ದು, ಗಣೇಶ್ ನೀರ್ಚಾಲ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ ವಿನೀತ್ ಕುಮಾರ್, ಸಮತಾ ಅಮೀನ್ ಮತ್ತು ಆರಾದ್ಯ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ತುಳು ಚಿತ್ರರಂಗದ ಖ್ಯಾತ ಕಲಾವಿದರಾದ ಸ್ವರಾಜ್ ಶೆಟ್ಟಿ, ರಾಹುಲ್ ಅಮೀನ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ ಕುಡ್ಲ, ಅದ್ವಿಕಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು