ಅಮೇರಿಕ: ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಲೆವಿಸ್ಟೋನ್ ಪ್ರಾಂತ್ಯದ ಮೈನೆ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ. ಆಂಡ್ರೊಸ್ಕೋಗ್ಗಿನ್ ಕೌಂಟಿ ಶೆರಿಫ್ ಕಚೇರಿ ತಮ್ಮ ಫೇಸ್ಬುಕ್ ಪುಟದಲ್ಲಿ ಶಂಕಿತನ ಎರಡು ಫೋಟೊಗಳನ್ನು ಬಿಡುಗಡೆ ಮಾಡಿದೆ.
ಬಂದೂಕುಧಾರಿಯು ತನ್ನ ಭುಜದ ಮೇಲೆ ಆಯುಧವನ್ನು ತೂಗುಹಾಕಿಕೊಂಡು ಪ್ರವೇಶಿಸುತ್ತಿರುವುದನ್ನು ಕಾಣಬಹುದು ಆತ ಈಗ ತಲೆಮರೆಸಿಕೊಂಡಿದ್ದಾನೆ ಎಂದಿದ್ದಾರೆ. ಪೊಲೀಸರು ದಾಳಿಕೋರನ ಫೋಟೊ ಬಿಡುಗಡೆ ಮಾಡಿದ್ದು, ಶಂಕಿತನ ಪತ್ತೆಗೆ ಜನರ ಸಹಾಯ ಕೋರಿದ್ದಾರೆ. ಇನ್ನು ಲೆವಿಸ್ಟನ್ನಲ್ಲಿರುವ ಸೆಂಟ್ರಲ್ ಮೈನೆ ಮೆಡಿಕಲ್ ಸೆಂಟರ್ನಲ್ಲಿ ಈ ಸಾಮೂಹಿ ಗುಂಡಿನ ದಾಳಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.