ಜಪಾನ್: ಜಪಾನ್ನಲ್ಲಿ 6.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಸುನಾಮಿ ಎಚ್ಚರಿಕೆಯನ್ನೂ ಕೂಡ ನೀಡಲಾಗಿದೆ. ಜಪಾನ್ ಕಾಲಮಾನದ ಪ್ರಕಾರ ಅ.5ರ ಇಂದು ಬೆಳಗ್ಗೆ 11 ಗಂಟೆಗೆ ಭೂಕಂಪ ಸಂಭವಿಸಿದೆ.
ಹವಾಮಾನ ಸಂಸ್ಥೆಯು ಜಪಾನ್ನ ಇಜು ದ್ವೀಪದಲ್ಲಿ 1 ಮೀಟರ್ ಎತ್ತರದ ಅಲೆಗಳು ಏಳಬಹುದು ಎಂದು ಮುನ್ಸೂಚನೆ ನೀಡಿದೆ. ಆದರೆ ಪೂರ್ವದಲ್ಲಿ ಚಿಬಾ ಪ್ರಿಫೆಕ್ಚರ್ನಿಂದ ಪಶ್ಚಿಮದ ಕಾಗೋಶಿಮಾ ಪ್ರಿಫೆಕ್ಚರ್ವರೆಗೆ 0.2 ಮೀಟರ್ಗಳಷ್ಟು ಅಲೆಗಳನ್ನು ನಿರೀಕ್ಷಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಕರಾವಳಿ ಭಾಗದ ಜನರಿಗೆ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಎನ್ಎಚ್ಕೆ ಟಿವಿ ಪ್ರಕಾರ, ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 6.6 ರಷ್ಟಿತ್ತು ಎಂದು ಹೇಳಲಾಗಿದೆ. ಕರಾವಳಿ ಮತ್ತು ನದಿ ದಡಗಳಿಂದ ಜನರು ದೂರ ಇರುವಂತೆ ಸರ್ಕಾರ ಎಚ್ಚರಿಕೆಯ ಎಚ್ಚರಿಕೆ ನೀಡಿದೆ.