ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನ ಈಶಾನ್ಯ ದ್ವೀಪಗಳಲ್ಲಿ ಸೋಮವಾರ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ 49 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭೂಕಂಪದ ಅನುಭವವಾದ ಕರಾವಳಿಯ ಎಲ್ಲಾ ಸ್ಥಳಗಳಿಂದ ಜನರು ತಕ್ಷಣವೇ ಸ್ವಯಂ ಸ್ಥಳಾಂತರಗೊಳ್ಳಬೇಕು ಎಂದು ನ್ಯೂಜಿಲೆಂಡ್ ನ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ತಕ್ಷಣವೇ ಹತ್ತಿರದ ಎತ್ತರದ ಪ್ರದೇಶಕ್ಕೆ ಜನರನ್ನು ಸ್ಥಳಾಂತರಿಸಿ ಎಂದು ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ.