ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನ ಉತ್ತರ ದ್ವೀಪದಲ್ಲಿ ಬುಧವಾರ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ನ್ಯೂಜಿಲೆಂಡ್ ನ ಜಿಯೋಸೈನ್ಸ್ ರಿಸರ್ಚ್ ಸರ್ವೀಸ್ ಪ್ರೊವೈಡರ್ ತಿಳಿಸಿದ್ದಾರೆ.
ಇದು ಸ್ಥಳೀಯ ಸಮಯ 19:38 ಕ್ಕೆ (0638 ಜಿಎಂಟಿ) ಸಂಭವಿಸಿದೆ, ಇದು ನ್ಯೂಜಿಲೆಂಡ್ ನ ನೈಋತ್ಯ ಉತ್ತರ ದ್ವೀಪದ ಪರಪರಮು ಪಟ್ಟಣದ ವಾಯುವ್ಯಕ್ಕೆ 50 ಕಿ.ಮೀ, ರಾಷ್ಟ್ರದ ರಾಜಧಾನಿ ವೆಲ್ಲಿಂಗ್ಟನ್ನಿಂದ ಉತ್ತರಕ್ಕೆ 55 ಕಿ.ಮೀ ದೂರದಲ್ಲಿ 57.4 ಕಿ.ಮೀ ಆಳದಲ್ಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಈವರೆಗೆ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.