ಟ್ರಪೊಲಿ: ಲಿಬಿಯಾದಲ್ಲಿ ಶತಮಾನದ ಭೀಕರ ದುರಂತವೆಂದೇ ಪರಿಗಣಿಸಲಾದ ಪ್ರವಾಹದಲ್ಲಿ 20 ಸಾವಿರ ಮಂದಿ ಪ್ರಾಣಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎರಡು ಅಣೆಕಟ್ಟುಗಳು ಒಡೆದು ಸುಮಾರು 20 ಸಾವಿರ ಜನರು ಸಾವನ್ನಪ್ಪಿದ್ದಾರೆ. ರಾತ್ರಿಯ ವೇಳೆ ಈ ಸುನಾಮಿಯಂತಹ ಪ್ರವಾಹ ಬಂದು ಸಾವಿರಾರು ಜನರು ಕ್ಷಣಮಾತ್ರದಲ್ಲಿ ನಾಪತ್ತೆಯಾಗಿದ್ದಾರೆ ಎಂದು ಡರ್ನಾ ಮೇಯರ್ ತಿಳಿಸಿದ್ದಾರೆ.
ಡೇನಿಯಲ್ ಚಂಡಮಾರುತದಿಂದಾಗಿ ಲಿಬಿಯಾದ ಕರಾವಳಿ ಭಾಗದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಮನೆಗಳು, ಕಟ್ಟಡಗಳು ನಾಮಾವೇಷವಾಗಿವೆ. ಬೀದಿ, ಬೀದಿಯಲ್ಲಿ ಹೆಣಗಳೇ ಕಾಣುತ್ತಿವೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡ ರೆಡ್ ಕ್ರಾಸ್ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.