News Karnataka Kannada
Saturday, May 04 2024
ವಿದೇಶ

ಕೀವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಾರು ಅಪಘಾತ

Zelensky involved in car accident: Spokesman
Photo Credit : Twitter

ಕೀವ್, ಸೆ.15: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಾರು ಅಪಘಾತವಾಗಿದೆ ಎಂದು ಅವರ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಝೆಲೆನ್ಸ್ಕಿ ಅವರು ಖಾರ್ಕಿವ್‌ನಲ್ಲಿ ತಮ್ಮ ಸೇನೆ ವಶಪಡಿಸಿಕೊಂಡ ಇಜಿಯಮ್ ನಗರಕ್ಕೆ ಭೇಟಿ ನೀಡಿದ ನಂತರ ಕೈವ್‌ಗೆ ತೆರಳುತ್ತಿದ್ದರು, ಅಲ್ಲಿ ಅವರು ಉಕ್ರೇನಿಯನ್ ಪಡೆಗಳನ್ನು ಭೇಟಿ ಮಾಡಿದ್ದರು. ತಮ್ಮ ಭೇಟಿಯ ಸಮಯದಲ್ಲಿ, ಅವರು ರಷ್ಯಾದ ಆಕ್ರಮಿತರ ವಿರುದ್ಧ ಕ್ಷಿಪ್ರ ಪ್ರತಿದಾಳಿಯಲ್ಲಿ ಭಾಗವಹಿಸಿದ ಸೈನಿಕರಿಗೆ ಧನ್ಯವಾದ ತಿಳಿಸಿದರು.

ಪ್ರಾಣಾಪಾಯದಿಂದ ಪಾರಾಗಿರುವ ಝೆಲೆನ್ಸ್ಕಿ, ಖಾರ್ಕಿವ್ ಪ್ರದೇಶದಿಂದ ಹಿಂತಿರುಗುತ್ತಿದ್ದ ವೇಳೆ ಕೈವ್‌ನಲ್ಲಿ, ಪ್ರಯಾಣಿಕರ ಕಾರು ಉಕ್ರೇನ್ ಅಧ್ಯಕ್ಷರ ಕಾರು ಮತ್ತು ಬೆಂಗಾವಲು ವಾಹನಗಳಿಗೆ ಢಿಕ್ಕಿ ಹೊಡೆದಿದೆ” ಎಂದು ವಕ್ತಾರ ಸೆರ್ಗಿ ನಿಕಿಫೊರೊವ್ ಫೇಸ್‌ಬುಕ್‌ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಅಪಘಾತ ನಡೆದ ಕೂಡಲೇ ವೈದ್ಯಕೀಯ ತಂಡ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಈ ಕುರಿತು ಹೇಳಿಕೆ ನೀಡಿದ ವಕ್ತಾರ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು