ಬ್ರೆಜಿಲ್: ದೈತ್ಯ ಕಾಡು ಅಮೆಜಾನ್ನಲ್ಲೊಂದು ವಿಮಾನ ಪತನವಾಗಿದೆ. ಬ್ರೆಜಿಲ್ನ ಅಕ್ರೆ ರಾಜ್ಯದ ರಾಜಧಾನಿ ರಿಯೊ ಬ್ರಾಂಕೊ ವಿಮಾನ ನಿಲ್ದಾಣದ ಬಳಿ ಅಮೆಜಾನ್ ಕಾಡಿನಲ್ಲಿ ಇದ್ದಕ್ಕಿದ್ದಂತೆ ವಿಮಾನ ಕೆಳಗೆ ಇಳಿದು ಬೆಂಕಿ ತಗುಲಿ ಸ್ಥಳದಲ್ಲೆ ಹೊತ್ತಿ ಉರಿದಿದೆ.
ಪೈಲೆಟ್, ಸಹ ಪೈಲೆಟ್ ಮತ್ತು ಚಿಕ್ಕ ಮಗುವೊಂದನ್ನು ಸೇರಿ 12 ಪ್ರಯಾಣಿಕರು ವಿಮಾನದಲ್ಲಿದ್ದರು. ಒಟ್ಟು 12 ಜನರು ಸಜೀವ ದಹನವಾಗಿದ್ದಾರೆ. ಅಮೆಜಾನ್ನಲ್ಲಿ ವಿಮಾನ ಹೊತ್ತಿ ಉರಿಯುತ್ತಿರುವ ವಿಡಿಯೋ ಹರಿದಾಡುತ್ತಿದೆ.