News Karnataka Kannada
Monday, April 29 2024
ಬೆಂಗಳೂರು

‘ನಮ್ಮ ಮೆಟ್ರೋ’ ಹೆಸರು ಬದಲಾವಣೆ: ಜಾಲತಾಣದಲ್ಲಿ ಪರ ವಿರೋಧ ಚರ್ಚೆ

'Namma Metro' rename: Debate on social media
Photo Credit : News Kannada

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯ ಹೆಮ್ಮೆ ನಮ್ಮ ಮೆಟ್ರೋ ಹೆಸರು ಬದಲಾವಣೆಯ ಚರ್ಚೆ ಜೋರಾಗಿದೆ. ಸಚಿವ ಎಂಬಿ ಪಾಟೀಲ್ ಅವರು ನಮ್ಮ ಮೆಟ್ರೋ ಬದಲು ಬಸವಣ್ಣ ಅಂತಾ ಹೆಸರಿಡಲು ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಅಂತಿದ್ದಾರೆ. ಸಚಿವರ ನಡೆಗೆ ಬೆಂಗಳೂರಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಹಲವರು ಹೆಸರು ಬದಲಾವಣೆ ವಿರೋಧಿಸಿ ‘ನಮ್ಮ ಮೆಟ್ರೋ’ ಹೆಸರೇ ಇರಲಿ ಎಂದಿದ್ದರೆ, ಇನ್ನು ಹಲವರು ಬದಲಾವಣೆಗೆ ವಿವಿಧ ಹೆಸರುಗಳನ್ನೂ ಪ್ರಸ್ತಾಪಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್‌’ ಕಾರ್ಪ್‌ನಲ್ಲಿ ಈ ಸಂಬಂಧ ನಗರದ ಮೆಟ್ರೋ ಪ್ರಯಾಣಿಕರು ಹಲವಾರು ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಬದಲಾವಣೆ, ಸಮಾನತೆಯ ಹರಿಕಾರ ಬಸವಣ್ಣನವರ ಹೆಸರನ್ನು ಮೆಟ್ರೋಕ್ಕೆ ‘ನಮ್ಮ ಬಸವ’, ‘ಬಸವ ಮೆಟ್ರೋ’ ಎಂದಿಡಬೇಕು ಎಂಬ ಸಲಹೆ ನೀಡಿದ್ದಾರೆ. ಇನ್ನೂ ಕೆಲವರು ನಾಡಪ್ರಭು ಕೆಂಪೇಗೌಡ ಮೆಟ್ರೋ ಎಂದು ಹೆಸರಿಸಬೇಕು, ಮೊದಲು ಮೆಟ್ರೋ ಕನಸು ಕಂಡ ನಟ ಶಂಕರ್‌ನಾಗ್‌ ಅವರ ಹೆಸರನ್ನೇ ಇಡಬೇಕು. ಅಣ್ಣಾವ್ರು ಡಾ। ರಾಜ್‌ಕುಮಾರ್‌ ಹೆಸರಿಡಬೇಕು ಎಂಬ ಅಭಿಪ್ರಾಯಗಳೂ ‘ಎಕ್ಸ್‌ʼ ನಲ್ಲಿ ವ್ಯಕ್ತವಾಗಿವೆ.

ಇದೇ ವೇಳೆ ಅನೇಕರು ಈಗಿರುವ ನಮ್ಮ ಮೆಟ್ರೋ ಎಂಬ ಹೆಸರೇ ಉಳಿಬೇಕು. ಯಾವುದೇ ಐತಿಹಾಸಿಕ, ಸಾಮಾಜಿಕ ಹರಿಕಾರರು, ರಾಜಕಾರಣಿಯ, ಸಿನಿಮಾ ನಟರ ಹೆಸರಿಡುವುದು ಬೇಡ. ಈಗಿನ ಪೀಳಿಗೆಗೆ ಮೆಟ್ರೋದ ಶ್ರೇಯಸ್ಸು ಸಲ್ಲಬೇಕು. ಹೀಗಾಗಿ ಈಗಿನ ಹೆಸರೂ ನಮಗೆ ಸೇರಿದ್ದು. ಕಳೆದ ಹನ್ನೆರಡು ವರ್ಷಗಳಿಂದ ‘ನಮ್ಮ ಮೆಟ್ರೋ’ ಹೆಸರಿದ್ದು, ಭಾವನಾತ್ಮಕವಾಗಿಯೂ ಜನರ ಮನಸ್ಸಲ್ಲಿ ಹಾಸುಹೊಕ್ಕಾಗಿದೆ. ಪ್ರತಿದಿನ ಲಕ್ಷಾಂತರ ಜನ ಇದನ್ನೇ ಬಳಸುತ್ತಿದ್ದಾರೆ. ಹೀಗಾಗಿ ಅನಗತ್ಯವಾಗಿ ಬದಲಿಸುವುದು ಬೇಡ ಎಂದು ಹಲವರು ಪೋಸ್ಟ್‌ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು