ರಷ್ಯಾ- ಉಕ್ರೇನ್ ನಡುವಿನ ಭೀಕರ ಯುದ್ಧದ ನಡುವೆ ಕೈವ್ ನ ವಾಯುನೆಲೆಯಲ್ಲಿ ಆಶ್ರಯ ಪಡೆದಿದ್ದ ಉಕ್ರೇನ್ ನ ಗರ್ಭಿಣಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ರಷ್ಯಾದ ಬಾಂಬ್ ದಾಳಿಯ ನಡುವೆ ಕೂಡ ಉಕ್ರೇನ್ನ ಮಹಿಳೆಯೋರ್ವಳು ಕೀವ್ನ ಆಶ್ರಯ ತಾಣದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, . ಉಕ್ರೇನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
ಈ ಕ್ಷಣವನ್ನು ವಾಯುನೆಲೆಯಲ್ಲಿ ಆಶ್ರಯ ಪಡೆದಿದ್ದ ಜನರು ದುಃಖ ಆತಂಕದ ನಡುವೆಯೂ ಖುಷಿಪಟ್ಟರು.
ರಷ್ಯಾ ಭೀಕರ ದಾಳಿಯ ನಡುವೆ ಆಶ್ರಯ ತಾಣದಲ್ಲಿ ಹುಟ್ಟಿದ ಮಗುವಿಗೆ ಸ್ವಾತಂತ್ರ್ಯ(Freedom) ಎಂದು ಹೆಸರಿಡಲಾಗಿದೆ.
ಮಗುವಿನ ಫೋಟೋ ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಾಯಿ, ಮಗಳು ಆರೋಗ್ಯವಾಗಿದ್ದಾರೆಂಬ ಮಾಹಿತಿ ನೀಡಿದೆ.
First (to our knowledge) baby was born in one of the shelters in Kyiv. Under the ground, next to the burning buildings and Russian tanks… We shall call her Freedom! 💛💙 Believe in Ukraine, #StandWithUkraine pic.twitter.com/gyV7l2y9K1
— MFA of Ukraine 🇺🇦 (@MFA_Ukraine) February 26, 2022