ಪಾಕಿಸ್ತಾನ: ಪಾಕಿಸ್ತಾನದ ಬಲೂಚಿಸ್ತಾನದ ಜಾಫರಾಬಾದ್ ಜಿಲ್ಲೆಯ ದೇರಾ ಅಲ್ಲಾಯಾರ್ ಪಟ್ಟಣದಲ್ಲಿ ಭಾನುವಾರ ಗ್ರೆನೇಡ್ ದಾಳಿ. ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 17 ಜನರು ಗಾಯಗೊಂಡಿದ್ದಾರೆ,ಗಾಯಗೊಂಡವರಲ್ಲಿ ಕನಿಷ್ಠ ನಾಲ್ವರ ಸ್ಥಿತಿ ಗಂಭೀರ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಅಪರಿಚಿತ ಮೋಟರ್ಸೈಕ್ಲಿಸ್ಟ್ಗಳು ಸುಬತ್ಪುರ ಚೌಕ್ ಬಳಿ ಹ್ಯಾಂಡ್ ಗ್ರೆನೇಡ್ ಎಸೆದರು. ಇದು ಸ್ಫೋಟಗೊಂಡು ಇಬ್ಬರು ಟ್ರಾಫಿಕ್ ಪೊಲೀಸ್ ಕಾನ್ಸ್ಟೆಬಲ್ಗಳು ಸೇರಿದಂತೆ 17 ಜನರು ಗಾಯಗೊಂಡಿದ್ದಾರೆ.
ಸ್ಫೋಟದ ನಂತರ ಭದ್ರತಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡವರನ್ನು ನಾವು ಲರ್ಕಾನಾಗೆ ಸ್ಥಳಾಂತರಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಅಬ್ದುಲ್ ರಶೀದ್, ಹಬೀಬುಲ್ಲಾ, ಕಾಂಡೋ, ಹೈದರ್ ಅಲಿ, ಮೊಹ್ಸಿನ್ ಅಲಿ, ಅಬ್ದುಲ್ ರಸೂಲ್, ಮುಹಮ್ಮದ್ ಅಲಿ, ಅಲ್ಲಾ ದೀನಾ, ವಜೀರ್ ಖಾನ್, ಮುಹಮ್ಮದ್ ಸರ್ವರ್, ರೆಹಮತ್ ಅಲಿ ಸೇರಿದ್ದಾರೆ.