News Karnataka Kannada
Friday, May 03 2024
ವಿದೇಶ

ಪಾಕಿಸ್ತಾನ: ಉಸ್ತುವಾರಿ ಪ್ರಧಾನಿ ನೇಮಕ ಪ್ರಕ್ರಿಯೆಗೆ ಚಾಲನೆ

Imran Khan
Photo Credit :

ಇಸ್ಲಾಮಾಬಾದ್ : ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಉಸ್ತುವಾರಿ ಪ್ರಧಾನಿ ನೇಮಕ ಪ್ರಕ್ರಿಯೆಗೆ ಸೋಮವಾರ ಚಾಲನೆ ಸಿಕ್ಕಿದೆ. ಪ್ರಧಾನಿ ಇಮ್ರಾನ್ ಖಾನ್ ಅವರು, ಉಸ್ತುವಾರಿ ಪ್ರಧಾನಿ ಹುದ್ದೆಗೆ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹಮದ್ ಅವರನ್ನು ಸೋಮವಾರ ನಾಮನಿರ್ದೇಶನ ಮಾಡಿದ್ದಾರೆ.

ಉಸ್ತುವಾರಿ ಪ್ರಧಾನಿ ಹುದ್ದೆಗೆ ಹೆಸರು ಸೂಚಿಸುವಂತೆ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರು ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪ್ರತಿಪಕ್ಷದ ಮುಖ್ಯಸ್ಥ ಶಹಬಾಝ್‌ ಶರೀಫ್ ಅವರಿಗೆ ಸೂಚಿಸಿದ್ದರು. ಆದರೆ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಶಹಬಾಝ್‌ ಅವರು ನಿರಾಕರಿಸಿದ್ದು, ಇದು ಅಕ್ರಮ ಎಂದು ಪ್ರತಿಪಾದಿಸಿದ್ದಾರೆ.

ಪ್ರಧಾನಿ ಹಾಗೂ ಪ್ರತಿಪಕ್ಷದ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿ ಉಸ್ತುವಾರಿ ಪ್ರಧಾನಿಯನ್ನು ನೇಮಕ ಮಾಡುವ ಅಧಿಕಾರವನ್ನು ಪಾಕಿಸ್ತಾನದ ಸಂವಿಧಾನವು ಅಲ್ಲಿನ ಅಧ್ಯಕ್ಷರಿಗೆ ಒದಗಿಸಿದೆ. ಸಂವಿಧಾನದ 224ಎ(1)ರ ಪ್ರಕಾರ, ಉಸ್ತುವಾರಿ ಸರ್ಕಾರವು ಚುನಾವಣೆಯನ್ನು ಆಯೋಜಿಸುತ್ತದೆ.

ಉಸ್ತುವಾರಿ ಪ್ರಧಾನಿ ನೇಮಕ ಆಗುವವರೆಗೂ ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಅಧ್ಯಕ್ಷ ಅಲ್ವಿ ಪ್ರಕಟಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು