News Karnataka Kannada
Friday, May 03 2024
ವಿದೇಶ

ಪಾಕಿಸ್ತಾನ್ ಜೊತೆಗಿನ ಸಂಬಂಧ ಮರು ಪರಿಶೀಲನೆ : ಅಮೇರಿಕಾ

Joe Biden 20082021
Photo Credit :
ವಾಷಿಂಗ್ಟನ್‌ : ಒಂದೆಡೆ ಅಫ್ಘಾನಿಸ್ತಾನ ವಿಷಯದಲ್ಲಿ ಅಮೆರಿಕ್ಕೆ ಸಹಾಯ ಮಾಡುವುದಾಗಿ ಹೇಳುತ್ತಿರುವ ಪಾಕಿಸ್ತಾನ, ಮತ್ತೊಂದೆಡೆ ತಾಲಿಬಾನಿ ಸರ್ಕಾರಕ್ಕೆ ಬೆಂಬಲ ಸೂಚಿಸುತ್ತಿದೆ. ಹೀಗಾಗಿ ಆ ರಾಷ್ಟ್ರದ ಜೊತೆಗಿನ ಸಂಬಂಧವನ್ನು ನಾವು ಮರು ಪರಿಶೀಲನೆ ಮಾಡಲಿದ್ದೇವೆ ಎಂದು ಅಮೆರಿಕದ ಜೋ ಬೈಡೆನ್‌ ಆಡಳಿತ ಹೇಳಿದೆ.

ಸಂಸದೀಯ ಸಮಿತಿಯೊಂದರ ಮುಂದೆ ಹಾಜರಾಗಿದ್ದ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ಗೆ, ಸದಸ್ಯರು ಸರಣಿ ಪ್ರಶ್ನೆಗಳನ್ನು ಎಸೆದರು. ನ್ಯಾಟೋ ಹೊರತು ಪಡಿಸಿ ಪಾಕಿಸ್ತಾನವನ್ನು ಪ್ರಮುಖ ಮಿತ್ರ ರಾಷ್ಟ್ರ ಎಂದು ಅಮೆರಿಕ ಪರಿಗಣಿಸಿದೆ. ಆದರೆ ಕಳೆದ 2 ದಶಕಗಳಿಂದಲೂ ತಾಲಿಬಾನ್‌ ಉಗ್ರರು ಅದರಲ್ಲೂ ವಿಶೇಷವಾಗಿ ಹಕ್ಕಾನಿ ಸಂಘಟನೆ ಜೊತೆ ಪಾಕ್‌ ಸರ್ಕಾರ ಹತ್ತಿರದ ನಂಟು ಹೊಂದಿದೆ. ಪಾಕ್‌ ಸರ್ಕಾರದ ಇಂಥ ಹಲವು ಹಿತಾಸಕ್ತಿಗಳು ಅಮೆರಿಕದ ಪಾಲಿಗೆ ಮಾರಕವಲ್ಲವೇ ಎಂದು ಬ್ಲಿಂಕನ್‌ ಅವರನ್ನು ಸದಸ್ಯರು ಪ್ರಶ್ನಿಸಿದರು. ಈ ವೇಳೆ ಬ್ಲಿಂಕನ್‌ ಮುಂದಿನ ದಿನಗಳಲ್ಲಿ ಪಾಕಿಸ್ತಾನದ ನಡೆಯನ್ನು ನಮ್ಮ ಆಡಳಿತ ಪರಿಶೀಲಿಸಲಿದೆ ಎಂದು ಭರವಸೆ ನೀಡಿದರು.

ಆದರೆ ಇದಕ್ಕೆ ಒಪ್ಪದ ಸದಸ್ಯರು, ಪಾಕಿಸ್ತಾನಕ್ಕೆ ನೀಡಿರುವ ನ್ಯಾಟೋಯೇತರ ಅತ್ಯಾಪ್ತ ದೇಶ ಮನ್ನಣೆ ತೆಗೆಯುವುದು, ಆಫ್ಘನ್‌ ವಲಯದಲ್ಲಿ ಪಾಕ್‌ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ಪಾಕಿಸ್ತಾನದ ಮೇಲೆ ಕೆಲ ನಿರ್ಬಂಧಗಳನ್ನು ಹೇರಬೇಕು ಎಂದು ಸಲಹೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು