News Karnataka Kannada
Wednesday, May 01 2024
ವಿದೇಶ

ಭಾರತಕ್ಕೆ ಇರುವ ಪ್ರಯಾಣ ನಿರ್ಬಂಧವನ್ನು ಸಡಲಿಸಿದ ಅಮೇರಿಕಾ

America Visa Dt 18 6 21 No1862120 Newsk 7902028532
Photo Credit :

ವಾಷಿಂಗ್ಟನ್ : ಕೊರೊನಾ ಪ್ರಕರಣಗಳಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಭಾರತಕ್ಕೆ ಇರುವ ಪ್ರಯಾಣ ನಿರ್ಬಂಧವನ್ನು ಅಮೆರಿಕ ಕೊಂಚ ಸಡಿಲಗೊಳಿಸಿದೆ. ಭಾರತಕ್ಕೆ ಕಡ್ಡಾಯವಾಗಿ ಪ್ರಯಾಣಿಸಲೇಬಾರದು ಎಂಬ ನಿಯಮವಾದ ನಾಲ್ಕನೇ ಹಂತದಿAದ ಕಳೆದ ತಿಂಗಳು, ತುರ್ತು ಕೆಲಸದ ನಿಮಿತ್ತ ಪ್ರಯಾಣಿಸಲು ಅಡ್ಡಿಯಿಲ್ಲ ಎಂದು ನಿಯಮವನ್ನು ಸಡಿಲಗೊಳಿಸಿತ್ತು. ಈಗ ಎರಡನೆಯ ಹಂತದ ಪಟ್ಟಿಗೆ ಭಾರತವನ್ನು ಅದು ಹೆಸರಿಸಿದೆ.

ಟರ್ಕಿಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾದ ಹಿನ್ನೆಲೆಯಲ್ಲಿ ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ (ಸಿಡಿಸಿ) ಹಾಗೂ ವಿದೇಶಾಂಗ ಇಲಾಖೆ, ಟರ್ಕಿಯನ್ನು ನಾಲ್ಕನೇ ಹಂತದ ಪಟ್ಟಿಗೆ ಸೇರ್ಪಡೆ ಮಾಡಿದೆ. ಅಂದರೆ ಟರ್ಕಿಗೆ ಪ್ರಯಾಣಿಸದಂತೆ ತನ್ನ ನಾಗರಿಕರಿಗೆ ಸೂಚಿಸಿದೆ.

ಭಾರತದ ಕೋವಿಡ್ ಸನ್ನಿವೇಶದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಏಪ್ರಿಲ್ 30ರಂದು ಭಾರತದ ಮೇಲೆ ಪ್ರಯಾಣ ನಿರ್ಬಂಧಗಳನ್ನು ವಿಧಿಸಿದ್ದರು. ಕಳೆದ 14 ದಿನಗಳಲ್ಲಿ ಭಾರತಕ್ಕೆ ತೆರಳಿದ್ದ ಅಮೆರಿಕೇತರ ಪ್ರಜೆಗಳು ದೇಶಕ್ಕೆ ಪ್ರವೇಶಿಸದಂತೆ ನಿಷೇಧ ವಿಧಿಸಲಾಗಿತ್ತು.
ಭಾರತವನ್ನು ಎರಡನೆಯ ಹಂತದ ಪಟ್ಟಿಗೆ ಅಮೆರಿಕದ ವಿದೇಶಾಂಗ ಸಚಿವಾಲಯ ಸೇರ್ಪಡೆಗೊಳಿಸಿದೆ. ಅಂದರೆ ಬಹು ಎಚ್ಚರಿಕೆಯೊಂದಿಗೆ ಭಾರತಕ್ಕೆ ಪ್ರಯಾಣಿಸಬಹುದು ಎಂದು ಸೂಚಿಸಲಾಗಿದೆ. ಎಫ್‌ಡಿಎ ಮಾನ್ಯತೆ ಪಡೆದ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದುಕೊಂಡಿದ್ದರೆ ನೀವು ಸೋಂಕಿಗೆ ಒಳಗಾಗುವ ಮತ್ತು ಅದರ ಲಕ್ಷಣಗಳು ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆಗಳು ಇರುವುದಿಲ್ಲ ಎಂದು ಸಿಡಿಸಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು