ಬೀಜಿಂಗ್: ಇಂದು ಅತಿದೊಡ್ಡ ನಗರವಾದ ಶಾಂಘೈ ಲಾಕ್ ಮಾಡಲು ಪ್ರಾರಂಭಿಸಿದೆ, ಸಾಮೂಹಿಕ ಪರೀಕ್ಷೆ ನಡೆಯುತ್ತಿರುವುದರ ನಡುವೆ ಶಾಂಘೈನ ಪುಡಾಂಗ್ ಮತ್ತು ಹತ್ತಿರದ ಪ್ರದೇಶಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ.
ನಗರವನ್ನು ವಿಭಜಿಸುವ ಹುವಾಂಗ್ಪು ನದಿಯ ಪಶ್ಚಿಮ ಪ್ರದೇಶವು ಶುಕ್ರವಾರದಿಂದಲೇ ಲಾಕ್ಡೌನ್ ಪ್ರಾರಂಭವಾಗಿದೆ ದೇಶದ ಮೇಲೆ ಆರ್ಥಿಕತೆಯ ದುಷ್ಪರಿಣಾಮದ ಪ್ರಶ್ನೆಗಳ ಎದ್ದಿವೆ ಆದರೆ ಜನರು ಮನೆಯಲ್ಲೇ ಇರಬೇಕಾಗುತ್ತದೆ ತುರ್ತು ಅಗತ್ಯವೆಂದು ಪರಿಗಣಿಸದ ಕಚೇರಿಗಳು ಮತ್ತು ಎಲ್ಲಾ ವ್ಯವಹಾರಗಳನ್ನು ಮುಚ್ಚಲಾಗುತ್ತದೆ ಮತ್ತು ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಗುತ್ತದೆ.
ಜನರನ್ನು ಬಹು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದೆ. ಚೀನಾ ಈ ತಿಂಗಳು ರಾಷ್ಟ್ರವ್ಯಾಪಿ 56,000 ಕ್ಕೂ ಹೆಚ್ಚು ಸೋಂಕುಗಳನ್ನು ವರದಿ ಮಾಡಿದೆ, ಈಶಾನ್ಯ ಪ್ರಾಂತ್ಯದ ಜಿಲಿನ್ನಲ್ಲಿ ಏಕಾಏಕಿ ಸೋಂಕಿತರು ಹೆಚ್ಚಿಳ ಕಂಡುಬಂದಿದೆ.