News Karnataka Kannada
Thursday, May 02 2024
ವಿದೇಶ

ಚೀನಾದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಹಾವಳಿ

China
Photo Credit :

ಬೀಜಿಂಗ್: ಕೊರೊನಾದ ಹೊಸ ರೂಪಾಂತರ ವೈರಸ್ ಭೀತಿಯ ಮಧ್ಯೆ ಚೀನಾದ ಹೆಚ್ಚಿನ ಭಾಗಗಳ ಮೇಲೆ ಲಾಕ್ ಡೌನ್ ರೀತಿಯ ನಿರ್ಬಂಧ ಹೇರಲಾಗಿದೆ. ಇದಕ್ಕೆ ಕಾರಣ ಹೊಸ ಅಧ್ಯಯನದಲ್ಲಿ ನೀಡಲಾಗಿರುವ ಎಚ್ಚರಿಕೆ. ಇದರಲ್ಲಿ ಕೋವಿಡ್-19 ನಿರ್ಬಂಧಗಳನ್ನು ಏನಾದರೂ ತೆಗೆದುಹಾಕಿದರೆ ಚೀನಾವು ಸಾಂಕ್ರಾಮಿಕ ರೋಗದ ‘ಭಯಾನಕ ಪರಿಸ್ಥಿತಿ’ ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಚೀನಾದಲ್ಲಿ ಪ್ರತಿದಿನ 6.30 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಡ್ರ್ಯಾಗನ್ ದೇಶವು ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ.

ಚೀನಾ ಇತರ ದೇಶಗಳಂತೆ ಪ್ರಯಾಣ ನಿಷೇಧ ತೆಗೆದುಹಾಕಿದರೆ ಮತ್ತು ಕೊರೊನಾ ವೈರಸ್ ಸೋಂಕಿನ ಹರಡುವಿಕೆಗೆ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಕೈಬಿಟ್ಟರೆ ದೇಶದಲ್ಲಿ ಪ್ರತಿದಿನ 6.30 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಬಹುದು ಎಂದು ಪೀಕಿಂಗ್ ವಿಶ್ವವಿದ್ಯಾಲಯದ ತಜ್ಞರ ವರದಿ ಹೇಳಿದೆ. ‘ತೀವ್ರ ರೋಗ ಹರಡುವ ಸಾಧ್ಯತೆ ಇದ್ದು, ಇದರ ಹೊರೆಯನ್ನು ವೈದ್ಯಕೀಯ ವ್ಯವಸ್ಥೆಯೇ ಹೊರಲು ಸಾಧ್ಯವಿಲ್ಲ’ ಅಂತಾ ಮೌಲ್ಯಮಾಪನದಿಂದ ತಿಳಿದುಬಂದಿದೆ’ ಎಂದು ವರದಿ ಹೇಳಿದೆ. ಚೀನಾದಲ್ಲಿ ಶನಿವಾರ 23 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 20 ಪ್ರಕರಣಗಳು ಇತರ ದೇಶಗಳಿಂದ ಬಂದಿವೆ ಮತ್ತು ಬೀಜಿಂಗ್ ಸೇರಿದಂತೆ ಇತರ ನಗರಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ.

ಪ್ರಸ್ತುತ ಈ ನಿಯಮಗಳು ಚೀನಾದಲ್ಲಿವೆ

ಪ್ರಸ್ತುತ ವಿದೇಶಗಳಿಂದ ಚೀನಾಕ್ಕೆ ಬರುವವರು ಗೊತ್ತುಪಡಿಸಿದ ಹೋಟೆಲ್‌ಗಳಲ್ಲಿ 21 ದಿನಗಳ ಕಾಲ ಪ್ರತ್ಯೇಕವಾಗಿರಬೇಕಾಗುತ್ತದೆ. ಆಗಸ್ಟ್‌ ನಿಂದ ಅಮೆರಿಕ, ಬ್ರಿಟನ್, ಇಸ್ರೇಲ್, ಸ್ಪೇನ್ ಮತ್ತು ಫ್ರಾನ್ಸ್‌ ನ ಡೇಟಾವನ್ನು ವಿಶ್ಲೇಷಿಸುವ ಮೂಲಕ ಚೀನಾ ಈ ದೇಶಗಳಂತಹ ತಂತ್ರವನ್ನು ಅಳವಡಿಸಿಕೊಂಡರೆ ಅದರ ಪರಿಣಾಮ ಏನಾಗಬಹುದೆಂದು ನಿರ್ಣಯಿಸಲು ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ. ಆಗಸ್ಟ್‌ ನಲ್ಲಿ ಈ ಎಲ್ಲಾ ದೇಶಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣವು ಚೀನಾಕ್ಕಿಂತ ಹೆಚ್ಚಿತ್ತು. ಸಾಂಕ್ರಾಮಿಕ ರೋಗವನ್ನು ಎದುರಿಸಲು ಚೀನಾ ಕೂಡ ಅಮೆರಿಕದ ತಂತ್ರವನ್ನು ಅಳವಡಿಸಿಕೊಂಡರೆ ದೈನಂದಿನ ಪ್ರಕರಣಗಳ ಸಂಖ್ಯೆ 6,37,155 ಆಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಆದರೆ ಆಗಸ್ಟ್‌ ನಲ್ಲಿ ಪ್ರತಿದಿನ 1,50,098 ಪ್ರಕರಣಗಳು ಕಂಡುಬರುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು