News Karnataka Kannada
Friday, May 03 2024
ವಿದೇಶ

ಕಿವಿನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆ ಸ್ಕ್ಯಾನಿಂಗ್‌ನಲ್ಲಿ ಜೀವಂತ ಜೇಡ ಪತ್ತೆ

New Project 2021 10 24t121504.389
Photo Credit :

 ಚೀನಾ: ಕಿವಿಯಲ್ಲಿ ಸಮಸ್ಯೆ ಎಂದುಕೊಂಡು ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು, ಅವರ ಕಿವಿಯನ್ನು  ವೈದ್ಯರು ಸ್ಕ್ಯಾನಿಂಗ್‌ ಮಾಡಿದಾಗ ಅಲ್ಲಿ ಕ್ರಿಮಿಯೊಂದು ಕಂಡುಬಂದಿದೆ. ನಂತರ ಪರೀಕ್ಷೆ ಮಾಡಿದಾಗ ಅದು ಜೇಡರ ಹುಳು ಎಂದು ತಿಳಿದಿದೆ. ಮಾತ್ರವಲ್ಲದೇ ಒಂದು ದಿನ ಅದು ಕಿವಿಯೊಳಕ್ಕೆ ಜೀವಂತ ಆಗಿರುವುದೂ ತಿಳಿದಿದೆ. ಇದನ್ನು ನೋಡುತ್ತಿದ್ದಂತೆಯೇ ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಂತರ ವೈದ್ಯರು ಜೇಡರ ಹುಳುವನ್ನು ಇಲೆಕ್ಟ್ರಿಕ್ ಓಟೋಸ್ಕೋಪ್ ಬಳಸಿ ಹೊರ ತೆಗೆದಿದ್ದಾರೆ. ಇದು ಗಾತ್ರದಲ್ಲಿ ಬಹಳ ದೊಡ್ಡದಾಗಿ ಇರುವುದು ಕಂಡುಬಂದಿದೆ.

ಇದು ನಡೆದಿರುವುದು ಚೀನಾದ ಚೀನಾದ ದಕ್ಷಿಣದಲ್ಲಿರುವ ಹುನಾನ್ ಪ್ರಾಂತ್ಯದ ಝೂಝೂ ಎಂಬ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಯೀ ಎಂಬ ಹೆಸರಿನ ಮಹಿಳೆಯೊಬ್ಬರು ಕಿವಿನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ದಿನ ತೀವ್ರವಾಗಿ ಹಿಂಸೆ ಅನುಭವಿಸಿದ ಅವರು, ಕಿವಿಯಲ್ಲಿ ವಿಪರೀತ ಸೆಳೆತ ತಡೆದುಕೊಳ್ಳಲು ಆಗದೇ ವೈದ್ಯರ ಬಳಿ ಬಂದಿದ್ದರು. ತಮಗೆ ತುಂಬಾ ನೋವಾಗುತ್ತಿದೆ, ಕಿವಿಯೊಳಕ್ಕೆ ಏನೋ ಇದೆ ಎನ್ನಿಸುತ್ತಿದೆ, ಕಿವಿ ಕೂಡ ಸರಿಯಾಗಿ ಕೇಳುತ್ತಿಲ್ಲ ಎಂದು ಅವರು ಹೇಳಿದ್ದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು