ವೆಲ್ಲಿಂಗ್ಟನ್ : ನ್ಯೂಜಿಲೆಂಡಿನಲ್ಲಿ ಕಳೆದ 6 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ಆರೋಗ್ಯ ಇಲಾಖೆ, ಕೊರೊನಾದಿಂದ ಮೃತಪಟ್ಟ ಮಹಿಳೆಗೆ 90 ವರ್ಷ ವಯಸ್ಸಾಗಿದ್ದು, ಹಲವು ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ .
ಇದುವರೆಗೂ ದೇಶದಲ್ಲಿ 20 ಹೊಸ ಕೊರೊನಾ ಪ್ರಕರಣಗಳನ್ನು ದೇಶ ದಾಖಲಿಸಿದೆ. ಎಲ್ಲಾ ರೋಗಿಗಳು ಆಕ್ಲೆಂಡ್ ನಗರದ ನಿವಾಸಿಗಳು. ಕೊರೊನಾವನ್ನು ಭಾಗಶಃ ನಿಯಂತ್ರಿಸಿದ್ದ ನ್ಯೂಜಿಲೆಂಡಿನಲ್ಲಿ ಕಳೆದ ತಿಂಗಳೂ ಡೆಲ್ಟಾ ವೈರಾಣು ಕಾಣಿಸಿಕೊಂಡಿತ್ತು.