News Karnataka Kannada
Monday, April 29 2024
ವಿದೇಶ

ಕೋವಿ ಶೀಲ್ಡ್‌ ಲಸಿಕೆ ಪಡೆದವರು ಯೂರೋಪ್‌ ನ 9 ದೇಶಗಳಲ್ಲಿ ಸಂಚರಿಸಲು ಅನುಮತಿ

Covishield
Photo Credit :

ನವದೆಹಲಿ : ಭಾರತದ ಕೋವಿಶೀಲ್ಡ್​​ ಲಸಿಕೆ ಪಡೆದವರಿಗೆ, ಯೂರೋಪಿನ 9 ದೇಶಗಳು – ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್​​ಲ್ಯಾಂಡ್, ಐರ್ಲೆಂಡ್, ಸ್ಪೇನ್, ಎಸ್ಟೋನಿಯಾ ಮತ್ತು ಸ್ವಿಟ್ಜರ್ಲೆಂಡ್ – ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಗ್ರೀನ್ ಪಾಸ್​ ನೀಡಿವೆ. ಈ ದೇಶಗಳಿಗೆ ಭೇಟಿ ನೀಡುವ ಭಾರತೀಯರು ಕೋವಿಶೀಲ್ಡ್​ ಲಸಿಕೆ ಪಡೆದಿದ್ದಲ್ಲಿ ಕ್ವಾರಂಟೈನ್​ಗೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ.
ಆದಾಗ್ಯೂ ಭಾರತೀಯ ಲಸಿಕೆಗಳಾದ ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್​ಗೆ ಯೂರೋಪಿಯನ್​ ಒಕ್ಕೂಟದ ಉನ್ನತ ವೈದ್ಯಕೀಯ ಸಂಸ್ಥೆ ಯುರೋಪಿಯನ್ ಮೆಡಿಸಿನ್ಸ್​ ಏಜೆನ್ಸಿ(ಇಎಂಎ)ಯ ಅನುಮೋದನೆ ಇನ್ನೂ ಸಿಕ್ಕಿಲ್ಲ. ಇಎಂಎ ಈವರೆಗೆ ನಾಲ್ಕೇ ಲಸಿಕೆಗಳನ್ನು ಅನುಮೋದಿಸಿರುವುದು. ಅವುಗಳೆಂದರೆ ಫೈಜರ್​ ಬಯೋಎನ್​ಟೆಕ್​ನ ಕೋಮಿರ್ನಾಟಿ, ಅಮೆರಿಕದ ಮಾಡರ್ನದ ಕೋವಿಡ್ ಲಸಿಕೆ, ಯೂರೋಪಿನಲ್ಲಿ ಉತ್ಪಾದನೆಯಾಗುವ ಆಸ್ಟ್ರಾಜೆನೆಕಾದ ವಾಕ್ಸ್​ಜೆರ್ವ್​ರಿಯ ಮತ್ತು ಜಾನ್ಸನ್ ಅಂಡ್ ಜಾನ್ಸನ್​ನ ಜ್ಯಾನ್​ಸೆನ್ ಲಸಿಕೆಗಳು. ಈ ನಾಲ್ಕು ಲಸಿಕೆಗಳಲ್ಲಿ ಯಾವುದಾದರೂ ಒಂದನ್ನು ಪಡೆದವರಿಗೆ ಮಾತ್ರ ಯೂರೋಪಿನಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಒದಗಿಸುವ ವ್ಯಾಕ್ಸಿನೇಷನ್ ಪಾಸ್​ಪೋರ್ಟ್​ಗಳನ್ನು ನೀಡಲಾಗಿದೆ. ಆಸ್ಟ್ರಜೆನೆಕಾದ ಲಸಿಕೆಯನ್ನೇ ಆಕ್ಸ್​​ಫರ್ಡ್​ ಯೂನಿವರ್ಸಿಟಿ ಸಹಯೋಗದಲ್ಲಿ ಭಾರತದಲ್ಲಿ ಉತ್ಪಾದಿಸುತ್ತಿರುವ ಸೀರಮ್​ ಇನ್ಸ್​ಟಿಟ್ಯೂಟಿನ ಕೋವಿಶೀಲ್ಡ್​​ಗೆ ಇಎಂಎ ಅನುಮೋದನೆ ನೀಡಿಲ್ಲ. ಆದರೆ ಸದಸ್ಯ ರಾಷ್ಟ್ರಗಳು ಬೇರೆ ಲಸಿಕೆಗಳನ್ನು ಪಡೆದವರಿಗೆ ಈ ಸೌಲಭ್ಯವನ್ನು ವಿಸ್ತರಿಸಬಹುದಾಗಿದ್ದು, ಇದೀಗ 9 ರಾಷ್ಟ್ರಗಳು ಕೋವಿಶೀಲ್ಡ್​​ಗೆ ತಮ್ಮ ಮಾನ್ಯತೆಯನ್ನು ನೀಡಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು