News Karnataka Kannada
Wednesday, May 08 2024
ವಿದೇಶ

ಕರೋನಾ ಸೋಂಕು ; ಮತ್ತೊಂದು ಆಘಾತಕಾರಿ ಸುದ್ದಿ ಬಹಿರಂಗ

coivd 19
Photo Credit :

ಲಂಡನ್‌: ಪ್ರಪಂಚದಾದ್ಯಂತ ಮರಣ ಮೃದಂಗ ಬಾರಿಸಿದ ಕೋವಿಡ್‌ ಸೋಂಕು, ಜನರ ಜೀವವನ್ನಷ್ಟೇ ಅಲ್ಲ, ಜೀವಿತಾವಧಿಯನ್ನೂ ಕಿತ್ತುಕೊಂಡಿದೆ ಎಂಬ ಆಘಾತಕಾರಿ ಅಂಶವೊಂದು ಈಗ ಬಯಲಾಗಿದೆ.

2ನೇ ವಿಶ್ವಯುದ್ಧದ ಬಳಿಕ ಜನರ ಜೀವಿತಾವಧಿ ಅತಿಹೆಚ್ಚು ಕುಂಠಿತಗೊಂಡಿದ್ದು ಕೋವಿನ್‌ ಸೋಂಕಿನಿಂದಾಗಿ. ಮರಣಪ್ರಮಾಣದಲ್ಲಿ ಜಗತ್ತು ಈವರೆಗೆ ಸಾಧಿಸಿದ್ದ ಪ್ರಗತಿಯನ್ನು ಕಣ್ಣಿಗೆ ಕಾಣದ ವೈರಸ್‌ವೊಂದು ಕ್ಷಣಮಾತ್ರದಲ್ಲಿ ನುಚ್ಚು ನೂರು ಮಾಡಿದೆ ಎಂದು ಆಕ್ಸ್‌ಫ‌ರ್ಡ್‌ ವಿವಿ ನಡೆಸಿದ ಅಧ್ಯಯನವೊಂದು ತಿಳಿಸಿದೆ. ಆಕ್ಸ್‌ಫ‌ರ್ಡ್‌ನ ಲೆವೆರ್‌ಹೆಲ್ಮ್ ಸೆಂಟರ್‌ ಫಾರ್‌ ಡೆಮಾಗ್ರಾಫಿಕ್‌ ಸೈನ್ಸ್‌ನ ಸಂಶೋಧಕರು ಅಧ್ಯಯನ ನಡೆಸಿದ್ದು, ಅದರಲ್ಲಿ ಭಾರತೀಯ ಮೂಲದ ಡಾ| ರಿಧಿ ಕಶ್ಯಪ್‌ ಕೂಡ ಒಬ್ಬರು.

ಯುರೋಪ್‌, ಅಮೆರಿಕ, ಚಿಲಿ ಸೇರಿ 29 ದೇಶಗಳ ಮರಣಪ್ರಮಾಣದ ದಾಖಲೆಗಳನ್ನು ಇಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. 29ರ ಪೈಕಿ 27 ದೇಶಗಳಲ್ಲಿ ಜೀವಿತಾವಧಿ 2020ರಲ್ಲಿ ಕುಂಠಿತಗೊಂಡಿದೆ. 2015ಕ್ಕೆ ಹೋಲಿಸಿದರೆ 2020ರಲ್ಲಿ 15 ದೇಶಗಳ ಮಹಿಳೆಯರು ಮತ್ತು 10 ದೇಶಗಳ ಪುರುಷರ ಜೀವಿತಾವಧಿ ಇಳಿಕೆಯಾಗಿದೆ. ಜೀವಿತಾವಧಿ ಹೆಚ್ಚು ಕುಸಿತಗೊಂಡಿದ್ದು ಅಮೆರಿಕದಲ್ಲಿ. ಪುರುಷರ ಜೀವಿತಾವಧಿ 2019ಕ್ಕೆ ಹೋಲಿಸಿದರೆ ಈಗ 2.2 ವರ್ಷಗಳಷ್ಟು ಕುಸಿತವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು