News Karnataka Kannada
Monday, May 06 2024
ವಿದೇಶ

ಭದ್ರತಾ ಪಾಲುದಾರಿಕೆಯಲ್ಲಿ ಭಾರತ ಅಥವಾ ಜಪಾನ್ ನ್ನು ಸೇರಿಸಿಕೊಳ್ಳುವುದನ್ನು ಅಲ್ಲಗಳೆದ ಅಮೇರಿಕ

White House
Photo Credit :
ವಾಷಿಂಗ್ ಟನ್: ಆಸ್ಟ್ರೇಲಿಯಾ ಹಾಗೂ ಬ್ರಿಟನ್ ಒಳಗೊಂಡ ಹೊಸ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯಲ್ಲಿ ಭಾರತ ಅಥವಾ ಜಪಾನ್ ನ್ನು ಸೇರಿಸಿಕೊಳ್ಳುವುದನ್ನು ಅಮೇರಿಕ ತಳ್ಳಿಹಾಕಿದೆ.

ಇಂಡೋ-ಪೆಸಿಫಿಕ್ ಪ್ರದೇಶದ 21ನೇ ಶತಮಾನದ ಸವಾಲುಗಳನ್ನು ಎದುರಿಸಲು ಆಸ್ಟ್ರೇಲಿಯಾ-ಬ್ರಿಟನ್-ಅಮೇರಿಕ ಒಳಗೊಂಡ ತ್ರಿಪಕ್ಷೀಯ ಭದ್ರತಾ ಪಾಲುದಾರಿಕೆಯನ್ನು ರಚಿಸಲಾಗಿದೆ.

ಸೆ.15 ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೊರಿಸನ್ ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜಂಟಿಯಾಗಿ ತ್ರಿಪಕ್ಷೀಯ ಭದ್ರತಾ ಮೈತ್ರಿ ಎಯುಕೆಯುಎಸ್ ರಚನೆಯನ್ನು ಘೋಷಿಸಿದ್ದರು. ಈ ಯೋಜನೆಯಡಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾಗೆ ಅಣ್ವಸ್ತ್ರ ಸಾಮರ್ಥ್ಯದ ಸಬ್ ಮರೀನ್ ಗಳು ಲಭ್ಯವಾಗಲಿದೆ.

ಕಳೆದ ವಾರ ಎಯುಕೆಯುಎಸ್ ನ ಘೋಷಣೆ ಸೂಚನೆಯಾಗಿರಬೇಕೆಂದಿಲ್ಲ ಹಾಗೂ ಇಂಡೋ-ಪೆಸಿಫಿಕ್ ನ ಭದ್ರತೆಯ ವಿಷಯವಾಗಿ ಬೇರೆ ಯಾರೂ ಭಾಗಿಯಾಗಬಾರದು ಎಂಬ ಸಂದೇಶವನ್ನು ಫ್ರೆಂಚ್ ನ ಅಧ್ಯಕ್ಷರಿಗೂ ಅಮೇರಿಕ ಅಧ್ಯಕ್ಷರು ಕಳಿಸಿದ್ದಾರೆ ಎಂದು ಶ್ವೇತ ಭವನದ ಕಾರ್ಯದರ್ಶಿ ಜೆನ್ ಸಾಕಿ ಪತ್ರಕರ್ತರಿಗೆ ತಿಳಿಸಿದ್ದಾರೆ.

ಕ್ವಾಡ್ ಶೃಂಗಸಭೆಗಾಗಿ ಜಪಾನ್-ಭಾರತದ ನಾಯಕರು ವಾಷಿಂಗ್ ನಲ್ಲಿದ್ದು ಅವರನ್ನೂ ಹೊಸ ಭದ್ರತಾ ಮೈತ್ರಿಕೂಟದ ಭಾಗವಾಗಿಸುತ್ತೀರಾ? ಎಂಬ ಪ್ರಶ್ನೆಗೆ ಜೆನ್ ಸಾಕಿ ಉತ್ತರಿಸುತ್ತಿದ್ದರು. ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶಗಳು ಕ್ವಾಡ್ ನ ಸದಸ್ಯ ರಾಷ್ಟ್ರಗಳಾಗಿವೆ. ಸೆ.24 ರಂದು ಜೋ ಬೈಡನ್ ಆಯೋಜಿಸಿರುವ ಕ್ವಾಡ್ ಸಭೆಯಲ್ಲಿ ಮೊದಲ ಬಾರಿಗೆ ದೇಶಗಳ ನಾಯಕರು ಭೌತಿಕವಾಗಿ ಪಾಲ್ಗೊಳ್ಳಲಿದ್ದಾರೆ.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾವನ್ನು ನಿಯಂತ್ರಿಸುವುದಕ್ಕೆ ಎಯುಕೆಯುಎಸ್ ಮೈತ್ರಿಕೂಟವನ್ನು ರಚನೆ ಮಾಡಿಕೊಳ್ಳಲಾಗಿದೆ. ಚೀನಾ ಎಯುಕೆಯುಎಸ್ ಮೈತ್ರಿಕೂಟವನ್ನು ತೀವ್ರ ಟೀಕೆ ಮಾಡಿದ್ದು ಈ ಗುಂಪಿಗೆ ದೀರ್ಘಾವಧಿ ಭವಿಷ್ಯವಿಲ್ಲ ಎಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು