News Karnataka Kannada
Thursday, May 02 2024
ದೇಶ

ಲತಾ ಮಂಗೇಶ್ಕರ್ ಅವರಿಗೆ ಇಂದು ಹುಟ್ಟಹಬ್ಬದ ಸಂಭ್ರಮ, ಶುಭ ಹಾರೈಸಿದ ನರೇಂದ್ರ ಮೋದಿ

Latha
Photo Credit :

ನವದೆಹಲಿ: ದೇಶದ ಹೆಸರಾಂತ ಹಿನ್ನೆಲೆ ಗಾಯಕಿ, ದಂತ ಕಥೆ, ಲತಾ ಮಂಗೇಶ್ಕರ್ ಅವರಿಗೆ ಇಂದು ಹುಟ್ಟಹಬ್ಬದ ಸಂಭ್ರಮ. ಅಪ್ರತಿಮ ಗಾಯಕಿ ಮತ್ತು ತಲೆಮಾರಿನ ಗಾಯಕರಿಗೆ ಸ್ಫೂರ್ತಿಯಾಗಿರುವ ಮಂಗೇಶ್ಕರ್ ಮಂಗಳವಾರ 92 ನೇ ವರ್ಷಕ್ಕೆ ಕಾಟ್ಟಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.

ಪ್ರತಿ ವರ್ಷ ಸಾಮಾಜಿಕ ಜಾಲತಾಣಗಳ ಮೂಲಕ ಲೆಜೆಂಡರಿ ಹಿನ್ನೆಲೆ ಗಾಯಕಿಗೆ ಹುಟ್ಟು ಹಬ್ಬದ ಶುಭಾಶಯ ಕೋರುವ ಪ್ರಧಾನಿ ಮೋದಿ, ಈ ವರ್ಷ ದೇವರು ನಿಮಗೆ ಇನ್ನೂ ಹೆಚ್ಚಿನ ಆಯುಷ್ಯ ಮತ್ತು ಆರೋಗ್ಯ ದಯಪಾಲಿಸಲಿ ಎಂದೂ ಪ್ರಧಾನಿ ತಮ್ಮ ಸಂದೇಶದಲ್ಲಿ ಶುಭ ಹಾರೈಸಿದ್ದಾರೆ.

ಲತಾ ಮಂಗೇಶ್ಕರ್ ಅವರ ಸುಮಧುರ ಧ್ವನಿ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ. ವಿನಮ್ರತೆ ಮತ್ತು ಭಾರತೀಯ ಸಂಸ್ಕೃತಿಯ ಬಗೆಗಿನ ಉತ್ಸಾಹಕ್ಕಾಗಿ ಅವರನ್ನು ಗೌರವಿಸಲಾಗುತ್ತದೆ. ವೈಯಕ್ತಿಕವಾಗಿ ಅವರ ಆಶೀರ್ವಾದವು ದೊಡ್ಡ ಶಕ್ತಿಯ ಮೂಲವಾಗಿದೆ. ಲತಾ ದಿದಿಯವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು