ಮಿಲಾನ್: ಇಟಲಿಯಲ್ಲಿ ಭಾನುವಾರ ಒಂದೇ ದಿನ 60,415 ಮಂದಿ ಕೊರೊನಾ ವೈರಸ್ ದೃಢಪಟ್ಟಿದ್ದು, 95 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ ಶನಿವಾರ ದಾಖಲಾದ 74,024ಕ್ಕಿಂತ ಭಾನುವಾರ ಕೋವಿಡ್ ಸಂಖ್ಯೆ ಇಳಿಕೆಯಾಗಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚಳವಾಗಿದೆ.
ಶನಿವಾರ 85 ಮಂದಿಯನ್ನು ಕೋವಿಡ್ ಬಲಿಪಡೆದಿತ್ತು.
ಇದರೊಂದಿಗೆ ಈವರೆಗೆ ಇಟಲಿಯಲ್ಲಿ ಕೊರೊನಾ ಮಹಾಮಾರಿಗೆ 1,57,785 ಮಂದಿ ಬಲಿಯಾದಂತಾಗಿದೆ. ಬ್ರಿಟನ್ ಬಳಿಕ ಯುರೋಪ್ ದೇಶಗಳಲ್ಲೇ ಅತಿಹೆಚ್ಚು ಸಾವಿನ ಸಂಖ್ಯೆ ಇಟಲಿಯಲ್ಲಿ ದೃಢಪಟ್ಟಿದೆ. ಅಲ್ಲದೆ ದೇಶದಲ್ಲಿ ಒಟ್ಟು 1.3 ಕೋಟಿ ಮಂದಿಗೆ ಸೋಂಕು ವ್ಯಾಪಿಸಿದಂತಾಗಿದೆ.