ಇಂಡೋನೇಷಿಯಾ: ಇಂದು ಮುಂಜಾನೆ 1:39 ಕ್ಕೆ ಇಂಡೋನೇಷ್ಯಾದ ಬುಕಿಟಿಂಗ್ಗಿ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದ್ದು, 6.2 ತೀವ್ರತೆ ದಾಖಲಾಗಿದೆ.
ಜಿಯೋಲಾಜಿಕಲ್ ಸರ್ವೇ ಪ್ರಕಾರ, ಈ ಭಾಗದ 66 ಕಿ.ಮೀ. ಆಳದವರೆಗೆ 6.2 ಪ್ರಮಾಣದಷ್ಟು ಭೂಕಂಪನಗಳು ರಿಕ್ಟರ್ ಮಾಪಕದಲ್ಲಿ ದಾಖಲಾಗಿವೆ.
ಇನ್ನೂ, ಭೂಕಂಪನದ ಬಳಿಕ ಸಾವು-ನೋವು, ಹಾನಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.