News Karnataka Kannada
Sunday, May 05 2024
ವಿದೇಶ

ಇಂಗ್ಲೆಂಡ್‌ ಪ್ರಧಾನಿ ಸುನಕ್‌ ನಿವಾಸದಲ್ಲಿ ಭಾರತದ ಬುಡಕಟ್ಟು ಮಕ್ಕಳಿಗೆ ವಿಶೇಷ ಆತಿಥ್ಯ

Uk PM Sunak's residence hosts India's tribal children
Photo Credit : News Kannada

ಮುಂಬೈ: ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಮುಂಬೈ, ಬೆಂಗಳೂರು ಮತ್ತು ರಾಜಸ್ಥಾನದ 16 ಹಿಂದುಳಿದ ಸಮುದಾಯದ ಮಕ್ಕಳನ್ನು ತಮ್ಮ ಲಂಡನ್‌ನ 10 ಡೌನಿಂಗ್ ಸ್ಟ್ರೀಟ್‌ನ ಅಧಿಕೃತ ನಿವಾಸದಲ್ಲಿ ಆತಿಥ್ಯ ನೀಡಿದ್ದಾರೆ.

ಭಾರತದಿಂದ ಭೇಟಿ ನೀಡಿದ ಮಕ್ಕಳು ಮೊದಲಿಗೆ ಎಡಿನ್‌ಬರ್ಗ್‌ನ ಡಚೆಸ್ ಸೋಫಿ ಹೆಲೆನ್ ರೈಸ್-ಜೋನ್ಸ್ ಅವರನ್ನು ಭೇಟಿಯಾದರು. ಅದೇ ರೀತಿ ಎಡಿನ್‌ಬರ್ಗ್ ರಾಜಕುಮಾರ ಎಡ್ವರ್ಡ್ ಅವರ ಪತ್ನಿ, ಕಿಂಗ್ ಚಾರ್ಲ್ಸ್ III ರ ಕಿರಿಯ ಸಹೋದರನನ್ನು ಭೇಟಿಯಾದರು.

ಈ ಮಕ್ಕಳ ಗುಂಪಿನಲ್ಲಿ ಮುಂಬೈ ಕೊಳೆಗೇರಿಯಿಂದ ಹತ್ತು ಮಂದಿ, ಕರ್ನಾಟಕದ ಯಾದಗಿರಿಯಿಂದ ನಾಲ್ವರು ಮತ್ತು ರಾಜಸ್ಥಾನದ ಜುಂಜುನುವಿನಿಂದ ಇಬ್ಬರು ಹುಡುಗಿಯರು ಸೇರಿದ್ದರು. ಅವರನ್ನು ಮುಂಬೈ ಎನ್‌ಜಿಒ ಆಸ್ಕರ್ ಫೌಂಡೇಶನ್, ಸಮುದಾಯ ಆಧಾರಿತ ಸ್ಪೋರ್ಟ್ಸ್ ಫಾರ್ ಡೆವಲಪ್‌ಮೆಂಟ್ (ಎಸ್ 4 ಡಿ) ಸಂಸ್ಥೆಯು ಯುಕೆ ಪ್ರವಾಸಕ್ಕೆ ಕರೆದೊಯ್ಯಿತು. ಸುನಕ್ ದಂಪತಿಗಳೊಂದಿಗೆ ಮಕ್ಕಳು ತಮ್ಮ ಜೀವನದ ಅನುಭವಗಳು, ಫುಟ್‌ಬಾಲ್‌ ಕ್ರೀಡೆಯಲ್ಲಿರುವ ಆಸಕ್ತಿ, ಶಿಕ್ಷಣ ಮತ್ತು ಲಿಂಗ ಸಮಾನತೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ರಾಡ್‌ಫೀಲ್ಡ್ ಕಾಲೇಜ್ ಆಯೋಜಿಸಿದ್ದ ಭೋಜನ ಕೂಟದಲ್ಲಿ ಈ ಮಕ್ಕಳನ್ನು ಭೇಟಿಯಾದ ಡಚೆಸ್ ಆಫ್ ಎಡಿನ್‌ಬರ್ಗ್ ಅವರು ಮುಂಬೈನ ಅಂಬೇಡ್ಕರ್ ನಗರ ಪ್ರದೇಶಕ್ಕೆ ಭೇಟಿ ನೀಡಿದ ಅನುಭವಗಳನ್ನು ವಿವರಿಸಿದರು. ಅಲ್ಲದೆ ಕ್ರೀಡೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಆಸ್ಕರ್ ಫೌಂಡೇಶನ್‌ನ ಚಟುವಟಿಕೆಗಳಿಗೆ ತಮ್ಮ ಬೆಂಬಲ ಒದಗಿಸುವುದಾಗಿ ಹೇಳಿದರು.

ಆಸ್ಕರ್ ಫೌಂಡೇಶನ್‌ನ ಸಂಸ್ಥಾಪಕ ಅಶೋಕ್ ರಾಥೋಡ್, ನಾಲ್ಕನೇ ಬಾರಿ ಇಂತಹ ಪ್ರವಾಸ ಆಯೋಜಿಸುತ್ತಿದ್ದು, ಇದುವರೆಗೆ 107 ಮಕ್ಕಳು ಯುಎಸ್‌ಎ, ಸ್ಪೇನ್, ಸ್ವೀಡನ್ ಮತ್ತು ಡೆನ್ಮಾರ್ಕ್‌ನಂತಹ ವಿವಿಧ ದೇಶಗಳಿಗೆ ಮಕ್ಕಳು ಉಚಿತವಾಗಿ ಪ್ರವಾಸ ಮಾಡಿದ್ದಾರೆ. ಈ ವರ್ಷದ ಹದಿನೈದು ದಿನಗಳ ಪ್ರವಾಸದಲ್ಲಿ, ಹುಡುಗರು ಮತ್ತು ಹುಡುಗಿಯರು ಯುಕೆ ಮತ್ತು ಯುರೋಪಿಯನ್ ಶಾಲಾ ತಂಡಗಳೊಂದಿಗೆ ಏಳು ಸೌಹಾರ್ದ ಫುಟ್ಬಾಲ್ ಪಂದ್ಯಗಳನ್ನು ಆಡಿದರು,

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು