News Karnataka Kannada
Saturday, April 27 2024
ವಿದೇಶ

ಆಸ್ಟೇಲಿಯಾದಲ್ಲೊಂದು ಪುಟ್ಟ ಇಂಡಿಯಾಕ್ಕಾಗಿ ಹೋರಾಟ

The fight for a little India in Australia
Photo Credit : IANS

ಮೆಲ್ಬೋರ್ನ್‌: ಮುಂಬರುವ ಮೇನಲ್ಲಿ ಪ್ರಧಾನಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ಭಾರತೀಯರೇ ಹೆಚ್ಚಾಗಿರುವ ಹ್ಯಾರಿಸ್‌ ಪಾರ್ಕ್‌ಗೆ ಲಿಟ್ಲ್‌ ಇಂಡಿಯಾ ಎಂಬುದಾಗಿ ನಾಮಕರಣ ಮಾಡುವಂತೆ ಒತ್ತಾಯ ಕೇಳಿಬಂದಿದೆ.

ಪಶ್ಚಿಮ ಸಿಡ್ನಿಯಲ್ಲಿರುವ ಹ್ಯಾರಿಸ್‌ ಪಾರ್ಕ್‌ ಭಾರತೀಯ ತಿಂಡಿತಿನಿಸುಗಳ ಪ್ರಖ್ಯಾತ ಸ್ಥಳವಾಗಿದ್ದು , 5043 ಜನಸಂಖ್ಯೆ ಹೊಂದಿದೆ. ಈ ಪೈಕಿ 45 ಶೇ. ಭಾರತೀಯ ಮೂಲದವರಾಗಿರುವುದು ಪ್ರಮುಖ ಅಂಶ.

ಈ ನಿಟ್ಟಿನಲ್ಲಿ ಪಾರಮಟ್ಟ ಕೌನ್ಸಿಲ್‌ ಸಭೆಯು ಮೇರಿಯನ್‌ ಹ್ಯಾರಿಸ್‌ ಪಾರ್ಕ್‌ನಲ್ಲಿರುವ ವೀಗ್ರಮ್‌ ಸ್ಟೀಟ್‌, ಸ್ಟೇಶನ್‌ ಸ್ಟ್ರೀಟ್‌ ಅನ್ನು ಲಿಟ್ಲ್‌ ಇಂಡಿಯಾ ಎಂದು ನಾಮಕರಣ ಮಾಡುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಪ್ಯಾರಮಟ್ಟ ಕೌನ್ಸಿಲರ್‌ ಪೌಲ್‌ ನಾಕ್‌ ಈ ಬಗ್ಗೆ ಹೇಳಿಕೆ ನೀಡಿದ್ದು, ಸಿಂಗಾಪುರದಲ್ಲಿರುವ ಲಿಟ್ಲ್‌ ಇಂಡಿಯಾದಂತೆ ಆಸ್ಟ್ರೇಲಿಯಾದ ಈ ಪ್ರದೇಶಕ್ಕೂ ಲಿಟ್ಲ್‌ ಇಂಡಿಯಾ ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.

ಆದರೆ ಆಸ್ಟ್ರೇಲಿಯಾ ಜಿಯೋಗ್ರಫಿಕಲ್‌ ಬೋರ್ಡ್‌ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಜನರಿಗೆ ಈ ಹೆಸರು ಗೊಂದಲ ಉಂಟುಮಾಡಬಹುದು ಎಂದು ಹೇಳಿದೆ. ಈ ಬಗ್ಗೆ ಪ್ಯಾರಮಟ್ಟ ಕೌನ್ಸಿಲ್‌ ನಿರಂತರ ಜಿಎನ್‌ಬಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೆಸರಿಗಾಗಿ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು