ನ್ಯೂಯಾರ್ಕ್: ಮಕ್ಕಳ ಲೈಂಗಿಕ ದೌರ್ಜನ್ಯದ ವಿಡಿಯೋ ಹಂಚಿಕೊಂಡ ಗೋವಾದ 34 ವರ್ಷದ ಕ್ರೂಸ್ ಶಿಪ್ ಉದ್ಯೋಗಿಗೆ ಫೆಡರಲ್ ಜಿಲ್ಲಾ ನ್ಯಾಯಾಲಯವು 188 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಏಂಜೆಲೊ ವಿಕ್ಟರ್ ಫೆರ್ನಾಂಡಿಸ್ ಅವರು 2022 ರ ಜನವರಿ 16 ಮತ್ತು ಏಪ್ರಿಲ್ 30 ರ ನಡುವೆ ಡೇನಿಯಲ್ ಸ್ಕಾಟ್ ಕ್ರೌಗೆ 13 ಮಕ್ಕಳ ಅಶ್ಲೀಲ ವೀಡಿಯೊಗಳನ್ನು ಕಳುಹಿಸಿದ್ದಾರೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ. ಫರ್ನಾಂಡಿಸ್ ಅವರು ಅಪ್ರಾಪ್ತ ಮಕ್ಕಳೊಂದಿಗೆ ಲೈಂಗಿಕ ಚಟುವಟಿಕೆಗೆ ಕ್ರೌಗೆ ವ್ಯವಸ್ಥೆ ಮಾಡುವ ಬಗ್ಗೆ ಸಂವಹನ ನಡೆಸಿದ್ದರು.
ಅಲ್ಲದೇ ಅಪರಿಚಿತ ವ್ಯಕ್ತಿಯೊಂದಿಗೆ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ಕ್ರಿಯೆ ಬಗ್ಗೆ ಸಂಭಾಷಣೆ ನಡೆಸಿದ್ದರು ಎನ್ನಲಾಗಿದೆ