ನವದೆಹಲಿ: ಜಿ20 ಅಧಿವೇಶನಕ್ಕಾಗಿ ಭಾರತಕ್ಕೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟೆಡ್ರೊ ಕಳೆದ ಭಾನುವಾರದಿಂದ ನವದೆಹಲಿಯಲ್ಲಿಯೇ ಬಾಕಿಯಾಗಿದ್ದರು. ತಾವು ಆಗಮಿಸಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಂಡುಬಂದ ಕಾರಣ ಅವರು ಭಾರತದಲ್ಲಿಯೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಅಲ್ಲದೆ ಪರ್ಯಾಯ ವ್ಯವಸ್ಥೆಯಾಗಿ ಸೋಮವಾರ ಮತ್ತೊಂದು ವಿಮಾನ ಕೆನಡಾದಿಂದ ಬಂದಿದ್ದರೂ ಆ ವಿಮಾನವೂ ಕೆಲ ಕಾರಣಗಳಿಂದ ಇಂಗ್ಲೆಂಡ್ನಲ್ಲಿಯೇ ಬಾಕಿಯಾಗಿತ್ತು.
ಆದರೆ ಮಂಗಳವಾರ ಮಧ್ಯಾಹ್ನ ಟೆಡ್ರೊ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆನಡಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ವಿಮಾನದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ತಾವು ಬಂದಿದ್ದ ವಿಮಾನದಲ್ಲಿಯೇ ಟೆಡ್ರೊ ಮರಳಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, “ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರದ ನನ್ನ ಸಹೋದ್ಯೋಗಿಗಳ ಪರವಾಗಿ, ನಾನು ಇಂದು ವಿಮಾನ ನಿಲ್ದಾಣದಲ್ಲಿ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರನ್ನು ಬೀಳ್ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
On behalf of PM @narendramodi Ji and my colleagues in govt, I was at the airport today to thank Mr. Justin Trudeau, Hon’ble Prime Minister of Canada @JustinTrudeau for his presence at the #G20Summit and wished him and his entourage a safe trip back home. 🇮🇳 🇨🇦 pic.twitter.com/8gEg694YCs
— Rajeev Chandrasekhar 🇮🇳 (@Rajeev_GoI) September 12, 2023