News Karnataka Kannada
Monday, May 06 2024
ವಿದೇಶ

SUNDAY STORY ಚಿನ್ನದ ಕಳ್ಳ ಸಾಗಾಟದ ಕೇಂದ್ರವಾಗುತ್ತಿದೆಯೇ ಕರಾವಳಿ ನಗರಿ ಮಂಗಳೂರು ?

Photo Credit :

SUNDAY  STORY      ಚಿನ್ನದ ಕಳ್ಳ ಸಾಗಾಟದ ಕೇಂದ್ರವಾಗುತ್ತಿದೆಯೇ  ಕರಾವಳಿ ನಗರಿ ಮಂಗಳೂರು ?

ಹಳದಿ ಲೋಹ ಚಿನ್ನಕ್ಕೆ ಇಡೀ ವಿಶ್ವಾದ್ಯಂತ ಯಾವತ್ತೂ ಬೆಲೆ ಮತ್ತು ಬೇಡಿಕೆ ಯಾವತ್ತೂ ಇದ್ದೇ ಇದೆ. ನಮ್ಮ ದೇಶ ಭಾರತ ವಿಶ್ವದ ಅತೀ ದೊಡ್ಡ ಚಿನ್ನದ ಆಮದುದಾರ ರಾಷ್ಟ್ರಗಳಲ್ಲಿ ಒಂದು ಆಗಿದ್ದು 2019 ರಲ್ಲಿ 32.24 ಬಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ. ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ ಇದ್ದು ಇದರ ಆಮದು ಮೌಲ್ಯ 70.8 ಬಿಲಿಯನ್ ಡಾಲರ್ ಗಳಾಗಿದ್ದು ಸ್ವಿಡ್ಜರ್ ಲ್ಯಾಂಡ್ , ಚೀನಾ ನಂತರ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಭಾರತವು ಇಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತಿದ್ದರೂ ಕಳ್ಳ ಸಾಗಾಣೆಯ ಮೂಲಕ ಚಿನ್ನ ಬರುತ್ತಿರುವುದು ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸಾಗಣೆದಾರರು ಚಿನ್ನವನ್ನು ದ್ರವ ಅಥವಾ ಪೇಸ್ಟ್ ನ ರೂಪದಲ್ಲಿ ಅಡಗಿಸಿಟ್ಟುಕೊಂಡು ತರುತ್ತಿರುವುದು ಈಗ ಹೆಚ್ಚಾಗಿ ಪತ್ತೆ ಆಗುತ್ತಿರುವ ಕಳ್ಳ ಸಾಗಾಟದ ವಿಧಾನವಾಗಿದೆ. ಆದರೆ ನಮ್ ಚಾಣಾಕ್ಷ ಕಸ್ಟಂಸ್ ಇಲಾಕೆಯ ಹದ್ದಿನ ಕಣ್ಣಿನ ತಪಾಸಣೆಯಿಂದ ಸಾಗಾಟದಾರರು ತಪ್ಪಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ.
ಇತ್ತೀಚೆಗೆ ಕೇರಳ ಮುಖ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿ ಶಿವಶಮಕರ್ ಎಂಬುವವರು ಚಿನ್ನ ಕಳ್ಳ ಸಾಗಾಟದ ಗ್ಯಾಂಗ್ ನ ಸಂಪರ್ಕ ಹೊಂದಿ ಸಿಕ್ಕು ಬಿದ್ದು ನಂತರ ಬಂಧನಕ್ಕೀಡಾಗಿದ್ದರು. ಇದೀಗ ನಮ್ಮ ಕರಾವಳಿ ನಗರಿ ಮಂಗಳೂರು ವಿಮಾನ ನಿಲ್ದಾಣ ಚಿನ್ನ ಕಳ್ಳ ಸಾಗಣೆಯ ಪ್ರಮುಖ ಕೇಂದ್ರ ಆಗುವ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ. ಕಳೆದ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮಂಗಳೂರು, ಲಕ್ನೋ ಮತ್ತು ಅಹ್ಮದಾಬಾದ್ ಏರ್ ಪೋರ್ಟ್ ಗಳನ್ನು ಅದನಿ ಸಮೂಹಕ್ಕೆ ನಿರ್ವಹಣೆ ಮತ್ತು ಅಭಿವೃದ್ದಿಗಾಗಿ ಗುತ್ತಿಗೆ ನೀಡಿದೆ. .
ಕಾಕತಾಳಿಯವೆಂಬತೆ ಮಂಗಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವ ಅಕ್ರಮ ಚಿನ್ನ ಪ್ರಕರಣಗಳ ಸಂಖ್ಯೆ ಕಳೆದ ಮೂರು ತಿಂಗಳಿನಿಂದ ಧಿಡೀರ್ ಏರಿಕೆ ಕಂಡಿದೆ. ಕೊರೊನಾ ಲಾಕ್ ಡೌನ್ ತೆರವಾದ ಬಳಿಕ ವಿಮಾನಯಾನ ಆರಂಭವಾದ ನಂತರ ಈ ಹಿಂದೆ ಎಂದೂ ಆಗದಷ್ಟು ಅಕ್ರಮ ಚಿನ್ನ ಸಾಗಾಟ ಪ್ರಕರಣಗಳು ನಡೆಯುತ್ತಿದೆ. 2021 ಜನವರಿಂದ ಎಪ್ರಿಲ್19 ರವರೆಗಿನ ಲೆಕ್ಕಾಚಾರದ ಪ್ರಕಾರ ಕೇವಲ ಮೂರೂವರೆ ತಿಂಗಳಿನಲ್ಲಿ 21 ಕೆಜಿಗೂ ಅಧಿಕ ಚಿನ್ನವನ್ನು ಅಕ್ರಮ ಸಾಗಾಟ ಮಾಡಲು ಪ್ರಯತ್ನಿಸಿರುವ ವಿಚಾರ ಬೆಳಕಿಗೆ ಬಂದಿದೆ. ಇದರ ಒಟ್ಟು ಮೌಲ್ಯ ಹತ್ತು ಕೋಟಿಗೂ ಅಧಿಕವಾಗಿದೆ.
ಜನವರಿಯಲ್ಲಿ ಒಟ್ಟು 8 ಅಕ್ರಮ ಚಿನ್ನ ಸಾಗಾಟ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದು, 5.92 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಇದರ ಒಟ್ಟು ಮೌಲ್ಯ 3 ಕೋಟಿ ರೂಪಾಯಿ ಆಗಿತ್ತು. ಇನ್ನು ಫೆಬ್ರವರಿ ತಿಂಗಳಿನಲ್ಲಿ ಚಿನ್ನ ಸಾಗಾಟ ಪ್ರಕರಣದಲ್ಲಿ ಏರಿಕೆ ಕಂಡಿದ್ದು, ಕೇವಲ 29 ದಿನಗಳಲ್ಲಿ 15 ಚಿನ್ನ ಸಾಗಾಟ ಪ್ರಕರಣಗಳು ಕಂಡುಬಂದಿದೆ. 15 ಪ್ರಕರಣಗಳಲ್ಲಿ 4.94 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 4.39 ಕೋಟಿ ರೂಪಾಯಿ ಆಗಿದೆ. ಮಾರ್ಚ್ ತಿಂಗಳಿನಲ್ಲೂ 12 ಪ್ರಕರಣಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, 3.2 ಕೋಟಿ ರೂಪಾಯಿ ಮೌಲ್ಯದ 6.94 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಏಪ್ರಿಲ್ ತಿಂಗಳ 20 ದಿನದಲ್ಲಿ 5 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, 2.15 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಈ ದಂಧೆಯ ಹಿಂದೆ ಸ್ಮಗ್ಲಿಂಗ್ ಮಾಫಿಯಾ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ವಿದೇಶದಲ್ಲಿರುವ ಸ್ಮಗ್ಲರ್ ಗಳು ಭಾರತಕ್ಕೆ ಬರುವವರನ್ನು ಬಳಸಿಕೊಂಡು ಚಿನ್ನ ಸಾಗಾಟ ಮಾಡುವ ಸಾಧ್ಯತೆಗಳಿವೆ. ಹೆಚ್ಚಿನವರು ಕಮೀಷನ್ ಆಸೆಗೆ ಚಿನ್ನ ಸಾಗಾಟ ಮಾಡಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಸಿಕ್ಕಿಬೀಳುತ್ತಿದ್ದಾರೆ ಅಂತಾ ಹೇಳಲಾಗುತ್ತಿದ್ದು, ಅಕ್ರಮ ಚಿನ್ನ ಸಾಗಾಟ ಮಾಡುವವರ ಪೈಕಿ ಕೇರಳ, ಭಟ್ಕಳ ಮತ್ತು ಉತ್ತರ ಕನ್ನಡ ಮೂಲದವರೇ ಅಧಿಕವಾಗಿದ್ದಾರೆ. ಸ್ಮಗ್ಲರ್ ಗಳು ಒಂದು ವರ್ಗದ ಜನರನ್ನೇ ಗುರಿ ಮಾಡಿಕೊಂಡು ದಂಧೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕಸ್ಟಂಸ್ ಮೂಲಗಳ ಪ್ರಕಾರ ಈ ಕಳ್ಳ ಸಾಗಾಟದಲ್ಲಿ ಸಿಕ್ಕಿ ಬೀಳುತ್ತಿರುವವರು ಅನೇಕರು ಅಮಾಯಕರು. ಕರಾವಳೀ ಭಾಗದಿಂದ ಕೊಲ್ಲಿ ರಾಷ್ಟ್ರಗಳೆಡೆಗೆ ಉದ್ಯೋಗಕ್ಕಾಗಿ ತೆರಳುತ್ತಿರುವವರ ಸಂಖ್ಯೆ ತುಂಬಾ ದೊಡ್ಡದಿದೆ. ಈ ಉದ್ಯೋಗಿಗಳು ಅಲ್ಲಿಂದ ವಾಪಸಾಗುವಾಗ ಹಣದ ಆಮಿಷ ಒಡ್ಡುವ ಕಳ್ಳ ಸಾಗಾಟದ ಗ್ಯಾಂಗ್ ಅವರ ಕೈಗೆ ಚಿನ್ನವನ್ನು ಅಡಗಿಸಿಟ್ಟ ಬ್ಯಾಗ್ ನೀಡುತ್ತದೆ. ಅವರು ಈಲ್ಲಿನ ಏರ್ ಪೋರ್ಟಿನಲ್ಲಿ ಬಂದಿಳಿದ ಕೂಡಲೇ ಗ್ಯಾಂಗ್ ನ ಸದಸ್ಯರು ಬ್ಯಾಗ್ ನ್ನು ಪಡೆದುಕೊಂಡು ಹೋಗುತ್ತಾರೆ. ಈ ರೀತಿ ತರುವವರಿಗೆ 10 ರಿಂದ 25 ಸಾವಿರ ರೂಪಾಯಿಗಳವರೆಗೂ ಹಣ ನೀಡಲಾಗುತ್ತದೆ ಎನ್ನಲಾಗಿದೆ.
ದೇಶದ ಚಿನ್ನ ಕಳ್ಳಸಾಗಣೆಯಲ್ಲಿ ಮುಂಬೈನ ಛತ್ರಪತಿ ಶಿವಾಜಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಮೊದಲ ಸಸ್ಥಾನದಲ್ಲೂ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್ ಪೋರ್ಟ್ ದ್ವಿತೀಯ ಸ್ಥಾನದಲ್ಲೂ , ಚೆನ್ನೈ ವಿಮಾನ ನಿಲ್ದಾಣ ಮೂರನೇ, ಕ್ಯಾಲಿಕಟ್ ಏರ್ ಪೋರ್ಟ್ ನಾಲ್ಕನೇ ಮತ್ತು ಕೊಚಿನ್ ಏರ್ ಪೋರ್ಟ್ ಐದನೇ ಸ್ಥಾನದಲ್ಲಿವೆ.. ಈಗ ವಶಪಡಿಸಿಕೊಳ್ಳಲಾಗುತ್ತಿರುವ ಚಿನ್ನದ ಮೌಲ್ಯ ಗಮನಿಸಿದರೆ ಮಂಗಳೂರು ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವ ಸಾದ್ಯತೆ ಕಾಣುತ್ತಿದೆ. ದೇಶದ ಏರ್ ಪೋರ್ಟ್ ಗಳಲ್ಲಿ ವಶಪಡಿಸಿಕೊಳ್ಳಲಾಗುತ್ತಿರುವ ಚಿನ್ನದ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. 2017-18 ರಲ್ಲಿ ಕಸ್ಟಂಸ್ ಇಲಾಖೆ ಏರ್ ಪೋರ್ಟ್ ಗಳಲ್ಲಿ ವಶಪಡಿಸಿಕೊಂಡ ಒಟ್ಟು ಚಿನ್ನ 2336 ಕೆಜಿ ಆಗಿತ್ತು. 2018-19 ರಲ್ಲಿ ಈ ಪ್ರಮಾಣ 2656 ಕೆಜಿಗಳಿಗೆ ಮತ್ತು 2019-20 ರಲ್ಲಿ ಈ ಪ್ರಮಾಣ 2867 ಕೆಜಿಗಳಿಗೆ ತಲುಪಿದೆ. ಕಸ್ಟಂಸ್ ನ ಹದ್ದಿನ ಕಣ್ಣಿನ ತಪಾಸಣೆಯಿಂದ ಸುಲಭವಾಗಿ ಪಾರಾಗುವುದು ಸಾದ್ಯವಿಲ್ಲ ಎಂದು ಗೊತ್ತಿದ್ದರೂ ಕಳ್ಳ ಸಾಗಾಟದಾರರು ಚಿನ್ನ ಸಾಗಿಸಿ ಸಿಕ್ಕು ಬೀಳುತ್ತಿರುವುದೇಕೆ ಎಂಬುದೇ ಯೋಚಿಸಬೇಕಾದ ವಿಷಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು