News Karnataka Kannada
Friday, May 03 2024
ವಿದೇಶ

ಬ್ರಿಟನ್​​ನ ‘ಬೆಸ್ಟ್​​​​ ಡ್ರೆಸ್ಡ್ ಫಾರ್ ಫ್ಯಾಶನ್’ ಗೌರವ ಮುಡಿಗೇರಿಸಿಕೊಂಡ ಅಕ್ಷತಾ ಮೂರ್ತಿ

akshata
Photo Credit : Twitter

ಬ್ರಿಟನ್: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ತಿಳಿದೆ ಇರುವಂತೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರನ್ನು ವಿವಾಹ ಆಗಿದ್ದಾರೆ. ಇದೀಗ ಅಕ್ಷತಾ ಮೂರ್ತಿ ಫ್ಯಾಶನ್‌ ಶೋ ಪ್ರಥಮ ಸ್ಥಾನ ಪಡೆದಿದ್ದಾರೆ. ಬ್ರಿಟನ್​​​ನ ಜನಪ್ರಿಯ ನಿಯತಕಾಲಿಕೆ ಬಿಡುಗಡೆ ಮಾಡಿದ ಪಟ್ಟಿಯ ಅನುಸಾರ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ,ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಯವರು ಬ್ರಿಟನ್​​ನ ಅತ್ಯುತ್ತಮ ಡ್ರೆಸ್ಡ್ ಫಾರ್ ಫ್ಯಾಶನ್​ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

2023 ರಲ್ಲಿ ಬ್ರಿಟನ್‌ನಲ್ಲಿ ಅತ್ಯುತ್ತಮ ಉಡುಪು ಧರಿಸಿರುವ ಸಾಕಷ್ಟು ಸೆಲೆಬ್ರೆಟಿಗಳನ್ನು ಹಿಂದಿಕ್ಕಿ ಅಕ್ಷತಾ ಮೂರ್ತಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. 43 ವರ್ಷದ ಅಕ್ಷತಾ ಅವರು ಉದ್ಯಮಿಯಾಗಿ ಹೆಸರುವಾಸಿಯಾಗಿದ್ದರೂ, ಕೂಡ ಫ್ಯಾಶನ್ ಉಡುಪುಗಳ ಬಗ್ಗೆ ಅತಿಯಾದ ಆಸಕ್ತಿಯನ್ನು ಹೊಂದಿದ್ದಾರೆ. ಏಕೆಂದರೆ ಅವರು ಫ್ಯಾಷನ್ ಡಿಸೈನರ್ ಆಗಿ ಕೂಡ ಕೆಲಸ ಮಾಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು