News Karnataka Kannada
Friday, May 03 2024
ವಿದೇಶ

ಬಂಧನ ಭೀತಿಯಲ್ಲಿ ರಷ್ಯಾ ಅಧ್ಯಕ್ಷ: ಜಿ20 ಸಭೆಗೆ ಭಾಗಿಯಾಗದಿರಲು ನಿರ್ಧಾರ

Vladimir Putin
Photo Credit : News Kannada

ಮಾಸ್ಕೋ: ಯುದ್ಧ ಅಪರಾಧಗಳ ಆರೋಪದ ಮೇಲೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಲ್ಲಿ ವಾರಂಟ್ ಹೊರಡಿಸಿರುವ ಹಿನ್ನೆಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್  ಭಾರತದಲ್ಲಿ ನಡೆಯಲಿರುವ ಜಿ20 ಸಭೆಯಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ ಎಂದು ಕ್ರೆಮ್ಲಿನ್ ತಿಳಿಸಿದೆ.

ಅಂತಾರಾಷ್ಟ್ರೀಯ ಪ್ರಯಾಣದ ವೇಳೆ ಅವರ ಬಂಧನ ಸಾಧ್ಯತೆ ಹಿನ್ನೆಲೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ. ಇದೇ ಭೀತಿ ಹಿನ್ನೆಲೆ ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆಯಲ್ಲೂ ಅವರು ವೀಡಿಯೋ ಲಿಂಕ್ ಮೂಲಕ ಭಾಗವಹಿಸಿದರು.

ಜಿ20 ಶೃಂಗಸಭೆಯು ಸೆ. 9 ರಿಂದ 10 ರವರೆಗೆ ಭಾರತದಲ್ಲಿ ನಡೆಯಲಿದ್ದು, ದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆಯ ಕೊನೆಯಲ್ಲಿ ಜಿ20 ನಾಯಕರ ಘೋಷಣೆಯನ್ನು ಮಾಡಲಾಗುತ್ತದೆ. ಈ ವೇಳೆ ಎಲ್ಲ ದೇಶದ ನಾಯಕರು ಇರುವುದು ವಾಡಿಕೆ. ಆದಾಗ್ಯೂ ಸಭೆಯಿಂದ ದೂರ ಉಳಿಯಲು ಪುಟಿನ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು