ದುಬೈ: ದುಬೈನಲ್ಲಿ ಕಳೆದ ಕೆಲ ದಿನಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಈ ಹಿನ್ನಲೆಯಲ್ಲಿ ಜನರು ಪ್ರವಾಹ ಪೀಡಿತ ಸ್ಥಳಗಳತ್ತ ಹೋಗದಂತೆ ಆಡಳಿತ ಎಚ್ಚರಿಕೆ ನೀಡಿದೆ. ದುಬೈಯಲ್ಲಿ ಭಾರೀ ಮಳೆಯಿಂದ ರಸ್ತೆಗಳು ಹಾಗೂ ಇತರ ಸಮುಚ್ಛಯಗಳು ಜಲಾವೃತಗೊಂಡಿರುವ ಮತ್ತು ಕಾರುಗಳು ಬಹುತೇಕ ನೀರಿನಲ್ಲಿ ತೇಲುತ್ತಿರುವಂತಹ ದೃಶ್ಯಗಳ ಅನೇಕ ವಿಡಿಯೋ ಮತ್ತು ಫೋಟೋಗಳನ್ನು ಅಲ್ಲಿನ ನಿವಾಸಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ರೀತಿಯ ವಿಡಿಯೋವೊಂದರಲ್ಲಿ ದುಬೈನ ಜಲಾವೃತ ರಸ್ತೆಯಲ್ಲಿ ವ್ಯಕ್ತಿಯೋರ್ವ ದೋಣಿಯಲ್ಲಿ ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ.
Yesterday morning's heavy rain in Dubai, UAE wasn't natural; it was the successful result of a 2010 $11 million USD cloud seeding project by weather authorities, creating artificial rain in the deserts of Dubai and Abu Dhabi. 💦 Boom! Look at the technology! 🌧️🌍#DubaiRains pic.twitter.com/UnPGhdw0gp
— Mazi chiagoziem (@Mazichiagoziem) November 18, 2023