News Karnataka Kannada
Friday, May 03 2024
ಹೊರನಾಡ ಕನ್ನಡಿಗರು

ಸೆ.17 ಕ್ಕೆ ದುಬೈ ಯಲ್ಲಿ ಕೆ ಐ ಸಿ ಗ್ರಾಂಡ್ ಮೀಲಾದ್

Kic Grand Milad
Photo Credit : News Kannada

ದುಬೈ: ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯು ಎ ಇ ಸಮಿತಿ ಅಧೀನದಲ್ಲಿ ದುಬೈ ಕೆ ಎಂ ಸಿ ಸಿ ಸಭಾಂಗಣ ಅಬು ಹೈಲ್ ನಲ್ಲಿ ಕೆ ಐ ಸಿ ಗ್ರಾಂಡ್ ಮೀಲಾದ್ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ ಲುಹರ್ ನಮಾಝಿನ ಬಳಿಕ ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ ರವರ ನೇತೃತ್ವದಲ್ಲಿ ಮೌಲೂದ್ ಮಜ್ಲಿಸ್ ಪ್ರಾರಂಭ ಗೊಳ್ಳಲಿದೆ. ದುಬೈಯ ಪ್ರಸಿದ್ಧ ಬುರ್ದಾ ತಂಡದವರಿಂದ ಬುರ್ದಾ ಆಲಾಪನೆ ನಡೆಯಲಿದ್ದು ನಂತರ ಹಿರಿಯ ಕಿರಿಯ ವಿಭಾಗದ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ.

ಅಬ್ದುಲ್ ಖಾದರ್ ಬೈತಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪ್ರಸಕ್ತ ಕಾರ್ಯಕ್ರಮದಲ್ಲಿ ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ ರವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಲಿದ್ದಾರೆ. ಸಯ್ಯದ್ ಶುಹೈಬ್ ತಂಙಳ್ ದುಬೈ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಉಸ್ತಾದ್ ಇಸಾಕ್ ಕೌಸರಿ ರವರು ಕೆ ಐ ಸಿ ಸಂಸ್ಥೆಯ ಪರಿಚಯವನ್ನು ನೀಡಲಿದ್ದಾರೆ.

ವಿವಿಧ ಕ್ಷೇತ್ರಗಳ ಗಣ್ಯರು, ಹಿತೈಷಿಗಳು , ಸಹ ಸಂಸ್ಥೆಗಳ ನೇತಾರರು , ಕೆ ಐ ಸಿ ಹಿತೈಷಿಗಳು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಉಸ್ತಾದ್ ಹಮೀದ್ ಮುಸ್ಲಿಯಾರ್ ನೀರ್ಕಜೆ ರವರು ಮುಖ್ಯಪ್ರಭಾಷಣ ಗೈಯಲಿದ್ದಾರೆ. ಪ್ರಸಕ್ತ ಕಾರ್ಯಕ್ರದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆಗೊಳಿಸಲಾಗಿದ್ದು ಕೆ ಐ ಸಿ ಹಿತೈಷಿಗಳು ಅನಿವಾಸಿ ದೀನೀ ಸ್ನೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರವನ್ನು ಯಶಸ್ವಿಗೊಳಿಸುವಂತೆ ಮೀಲಾದ್ ಸ್ವಾಗತ ಸಮಿತಿ ಚೇರ್ಮನ್ ಜಬ್ಬಾರ್ ಬೈತಡ್ಕ, ಕಾರ್ಯದರ್ಶಿ ರಾಝಿಕ್ ಹಾರಾಡಿ ರವರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು